ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಈಚೆಗೆ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹಾಲು ವಿತರಿಸಲಾಯಿತು.
ವೆಂಕಟಯ್ಯನಛತ್ರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಲು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಎಂ. ಬಸವಣ್ಣ ಮಾತನಾಡಿ, ವಿಶ್ವ ಹಾಲು ದಿನಾಚರಣೆ ಮೂಲಕ ಮಕ್ಕಳಿಗೆ ಹಾಲಿನಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿ ಎಸ್. ನಾಗರಾಜು, ನಿರ್ದೇಶಕರಾದ ಗುರುಸ್ವಾಮಿ, ಲಕ್ಷ್ಮಣಯ್ಯ, ಮಹದೇವಶೆಟ್ಟಿ, ಬಸವಣ್ಣ, ಮುಖ್ಯಶಿಕ್ಷಕ ಚನ್ನಂಜಯ್ಯ, ಕಾರ್ಯದರ್ಶಿ ಚಿಕ್ಕಸ್ವಾಮಪ್ಪ ಹಾಜರಿದ್ದರು.
ಕೊತ್ತಲವಾಡಿ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಲು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ಹಾಲು ಪೌಷ್ಟಿಕ ಆಹಾರ. ಮಗುವಿನಿಂದ ವೃದ್ಧರವರೆಗೂ ಆರೋಗ್ಯ ಕಾಪಾಡಲು ಹಾಲು ಆವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಪಿ. ಮಹಾಂತಪ್ಪ. ಶಿವಮೂರ್ತಿ, ಮಹದೇವಸ್ವಾಮಿ, ಮಹೇಶ್, ಚಿನ್ನಮ್ಮ, ರಾಜಪ್ಪ, ವೆಂಕಟಯ್ಯ, ಕಾರ್ಯದರ್ಶಿ ರಾಜಶೇಖರಮೂರ್ತಿ ಹಾಜರಿದ್ದರು.
ಮಂಗಲ: ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ವಿಶ್ವ ಹಾಲು ದಿನಾಚರಣೆ ನಡೆಯಿತು. ಶಾಲಾ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮೈಮುಲ್ ವಿಸ್ತರಣಾಧಿಕಾರಿ ಎಸ್.ಎಂ. ವೆಂಕಟೇಶ್, ಸಂಘದ ಅಧ್ಯಕ್ಷರು, ನಿರ್ದೇಶಕರು, ಶಾಲಾ ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.