ADVERTISEMENT

ಶಿಕ್ಷಣ; ಪೋಷಕರ ಜವಾಬ್ದಾರಿಯೂ ಹೆಚ್ಚು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 9:45 IST
Last Updated 7 ಜುಲೈ 2012, 9:45 IST

ಸಂತೇಮರಹಳ್ಳಿ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವಲ್ಲಿ ಸಮುದಾಯ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಶಿವಣ್ಣ ತಿಳಿಸಿದರು.

ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ಶಾಲೆ ಗಾಗಿ- ನಾವು-ನೀವು ಕಾರ್ಯ ಕ್ರಮದಲ್ಲಿ ಮಾತನಾಡಿದರು.

14 ವರ್ಷ ಒಳಪಟ್ಟ ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಬೇಕು ಎಂಬ ಸರ್ಕಾರದ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಸ ಲಾಗುತ್ತಿದೆ. ಪೋಷಕರು ಹೆಚ್ಚಾಗಿ ಭಾಗವಹಿಸಿ ಅರಿವು ಮೂಡಿಸಿ ಕೊಂಡು ತಮ್ಮ ಮಕ್ಕಳ ಮೇಲೆ ಜವಾಬ್ದಾರಿ ಹೊರಬೇಕಾಗಿದೆ. ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಸವಲತ್ತುಗಳನ್ನು ನೀಡು ತ್ತಿದೆ. ಈ ಅವಕಾಶಗಳನ್ನು ಸದುಪ ಯೋಗ ಪಡಿಸಿಕೊಂಡು ಮಕ್ಕಳು ವಿದ್ಯಾವಂತರಾಗಿ ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದರು.

ಪೋಷಕರು ಶಾಲೆಗೆ ಆಗಾಗ್ಗೆ ಬೇಟಿ ನೀಡಿ ಮಕ್ಕಳ ಶಿಕ್ಷಣದ ಪ್ರಗತಿ ಬಗ್ಗೆ ಪರಿಶೀಲನೆ ಮಾಡಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಗಮನ ಹರಿಸಬೇಕು. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು, ಸಮು ದಾಯದವರು ಮತ್ತು ಜನಪ್ರತಿನಿಧಿಗಳು ಪಾತ್ರ ವಹಿಸಬೇಕು ಎಂದು ತಿಳಿಸಿದರು.

ತಾ.ಪಂ.ಸದಸ್ಯೆ ಪಾರ್ವತಮ್ಮ ಮಾಹಿತಿ ಗೋಡೆ ಅನಾವರಣ ಗೊಳಿಸಿ ಮತನಾಡಿ, ಮಕ್ಕಳು ಶಾಲೆಗೆ ಗೈರು ಹಾಜರಾಗದೆ ತಪ್ಪದೆ ಬರಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿನ ಹಕ್ಕಾಗಿದೆ. ಶಿಕ್ಷಕರು ಕೊಟ್ಟ ಮಾರ್ಗ ದರ್ಶನದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾ.ಪಂ.ಉಪಾಧ್ಯಕ್ಷ ಎಸ್.ರಾಜೇಶ್, ಪ್ರಾಂಶುಪಾಲ ಚಂದ್ರ ಶೇಖರ್, ಟಿ.ಕೆ.ರಂಗಯ್ಯ, ಚಂದ್ರ ಶೇಖರ್, ಮಂಜುನಾಥ್, ನಾಗಯ್ಯ ಇತರರು ಹಾಜರಿದ್ದರು.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.