ADVERTISEMENT

ಶೈಕ್ಷಣಿಕ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:43 IST
Last Updated 22 ಡಿಸೆಂಬರ್ 2012, 6:43 IST

ಕೊಳ್ಳೇಗಾಲ: ರೋಟರಿ ಮಿಡ್‌ಟೌನ್ ಸಂಸ್ಥೆ ವತಿಯಿಂದ ಪಟ್ಟಣದ ವಾಸವಿ ಮಹಲ್‌ನಲ್ಲಿ ಗುರುವಾರ ಸ್ವರೂಪ ಶಿಕ್ಷಣ ಬೃಹತ್ ಜಾಗೃತಿ ಜಾಥಾ ನಡೆಯಿತು.

ಬದುಕು ರೂಪಿಸುವ, ಉತ್ತಮ ಶಿಕ್ಷಣಹೊಂದುವ ಶಿಕ್ಷಣ ವ್ಯವಸ್ಥೆ ಬಗ್ಗೆ ನೂರಾರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
8ರಿಂದ10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸುವ, ನೆನಪಿನ ಶಕ್ತಿ ವೃದ್ಧಿಸುವ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು.

ರೋಟರಿ ಮಿಡ್-ಟೌನ್ ಅಧ್ಯಕ್ಷ ಆರ್.ಅರುಣ್‌ಕುಮಾರ್, ಗಿರೀಶ್‌ಜಡೆ, ಬಸವಲಿಂಗಪ್ಪ, ಪ್ರವೀಣ್, ಪ್ರದೀಪ್‌ಡೆವಿಡ್ ಫೆರ್ನಾಂಡಿಸ್, ಎಂ. ಶಿವಾನಂದ. ಪಿ.ನಟರಾಜು, ಜೆ.ಎಸ್.ರಾಂಮೋಹನ್ ಇದ್ದರು.

ಆಶಾ: ಪದಾಧಿಕಾರಿ ಆಯ್ಕೆ
ಕೊಳ್ಳೇಗಾಲ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಳ್ಳೇಗಾಲ ತಾಲ್ಲೂಕು ಘಟಕದ ನುತನ ಪದಾಧಿಕಾರಿಗಳಾಗಿ ಈ ಕೆಳಕಂಡವರು ಅವಿರೊಧವಾಗಿ ಆಯ್ಕೆಗೊಂಡಿದ್ದಾರೆ.

ಪಟ್ಟಣದ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ಈಚೆಗೆ ರಾಜ್ಯ ಸಮಿತಿ ಸಂಚಾಲಕ ಎಂ.ಶಶಿಧರ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆದು ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪುಟ್ಟಬಸಮ್ಮ(ಅಧ್ಯಕ್ಷರು), ಚೆನ್ನಾಜಮ್ಮ(ಕಾರ್ಯದರ್ಶಿ), ಲತಾಮಣಿ ,ಶಿವಮ್ಮ (ಉಪಾಧ್ಯ ಕ್ಷರು), ಸುಮತಿ, ಸುಲೋಚನ ಮಂಜುಳ, ಚಂದ್ರಮ್ಮ(ಜಂಟಿ ಕಾರ್ಯದರ್ಶಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT