ADVERTISEMENT

ಸಾರ್ವಜನಿಕ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಬಾಲಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:30 IST
Last Updated 20 ಫೆಬ್ರುವರಿ 2012, 6:30 IST

ಚಾಮರಾಜನಗರ: ಜನಪ್ರತಿನಿಧಿಗಳು ಹಾಗೂ ಅಧಿಕಾರಶಾಹಿಯ ನಿರ್ಲಕ್ಷ್ಯ ದಿಂದಾಗಿ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸೌಲಭ್ಯ ತಲುಪಲು ವಿಳಂಬವಾಗುತ್ತದೆ ಎಂಬುದಕ್ಕೆ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಹೊಸ ಕಟ್ಟಡವೇ ಸಾಕ್ಷಿಯಾಗಿದೆ!

ಕಟ್ಟಡದ ಕಾಮಗಾರಿ ಪೂರ್ಣ ಗೊಂಡು ಹಲವು ತಿಂಗಳು ಉರುಳಿ ದ್ದರೂ, ಇಂದಿಗೂ ಉದ್ಘಾಟನೆ ಗೊಂಡಿಲ್ಲ. ಇದರ ಪರಿಣಾಮ ಗ್ರಾಮೀಣರು ಹಾಗೂ ನಗರವಾಸಿಗಳು ಆರೋಗ್ಯ ಸೇವೆಯಿಂದ ವಂಚಿತರಾಗು ತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಜಿಲ್ಲಾಡಳಿತ ಕೂಡ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ನಾಗರಿಕರ ದೂರು.

ಜಿಲ್ಲಾ ಕೇಂದ್ರದಲ್ಲಿ ಎಂಟು ವರ್ಷದ ಹಿಂದೆ 150 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಕಾರ್ಯಾ ರಂಭ ಮಾಡಿತು. ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಕಲ್ಪಿಸುವ ಉದ್ದೇಶದಿಂದ ಇದನ್ನು 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸ ಲಾಯಿತು. ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿ 10 ಕೋಟಿ ರೂ ವೆಚ್ಚದಡಿ ಹೆಚ್ಚುವರಿ ಕಟ್ಟಡ ನಿರ್ಮಾ ಣಕ್ಕೂ ಚಾಲನೆ ಸಿಕ್ಕಿತು. 2011ರ ಏಪ್ರಿಲ್‌ನಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡ ಲಾಗಿತ್ತು. ನಿಗದಿತ ಅವಧಿಗೆ ಕಟ್ಟಡದ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಗೊಂಡಿಲ್ಲ.

ಸರ್ಕಾರದ ನಿಯಮಾವಳಿ ಪ್ರಕಾರ ಯಾವುದೇ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಶೇ. 75ರಷ್ಟು ಪೂರ್ಣ ಗೊಂಡ ಹಂತದಲ್ಲಿಯೇ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಸಿಬ್ಬಂದಿ ನೇಮಕಕ್ಕೆ ಇಂದಿಗೂ ಕ್ರಮಕೈಗೊಂಡಿಲ್ಲ. ಹೀಗಾಗಿ, ಕಟ್ಟಡ ಸಜ್ಜಾಗಿದ್ದರೂ ಸೂಕ್ತ ಸಿಬ್ಬಂದಿ ಇಲ್ಲದೆ ಭಣಗುಡುತ್ತಿದೆ.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿ ರುವಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ 18 ತಜ್ಞ ವೈದ್ಯರು ಸೇರಿದಂತೆ 112 ಹುದ್ದೆ ಮಂಜೂರಾಗಿವೆ. ಇದರಲ್ಲಿ 98 ಮಂದಿ ಮಾತ್ರವೇ ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರು ಇದ್ದಾರೆ. ಉತ್ತಮ ಆರೋಗ್ಯ ಸೇವೆ ನೀಡಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಆದರೆ, ಸರ್ಕಾರದ ಮಟ್ಟದಲ್ಲಿ ನೇಮಕಾತಿಯೇ ನಡೆದಿಲ್ಲ.

ಸರ್ಕಾರದ ಈ ಧೋರಣೆ ಜಿಲ್ಲೆಯ ನಾಗರಿಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ನಿಗದಿತ ಅವಧಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ನೇಮಕಾತಿ ನಡೆದಿದ್ದರೆ ಹೊಸ ಕಟ್ಟಡದಲ್ಲಿ 100 ಹಾಸಿಗೆ ಸೌಲಭ್ಯಕ್ಕೆ ಚಾಲನೆ ನೀಡಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿತ್ತು. ಜತೆಗೆ, ನೂತನ ಕಟ್ಟಡಕ್ಕೆ ಹೆರಿಗೆ, ಸರ್ಜರಿ, ಎಕ್ಸ್ ರೇ, ಮಕ್ಕಳ ವಿಭಾಗವನ್ನು ವರ್ಗಾಯಿಸುವ ಉದ್ದೇಶವೂ ಇತ್ತು.

ಆದರೆ, ಕಟ್ಟಡದ ಉದ್ಘಾಟನೆಗೆ ಬಾಲಗ್ರಹ ಹಿಡಿದಿರುವ ಪರಿಣಾಮ ಆರೋಗ್ಯ ಸೇವೆಗೆ ಹಿನ್ನಡೆಯಾಗುತ್ತಿದೆ.
`ಜೋಡಿರಸ್ತೆಯಲ್ಲಿ ಸಂಚರಿಸುವಾಗ ಹೊಸ ಕಟ್ಟಡ ಕಣ್ಣಿಗೆ ಬೀಳುತ್ತದೆ. ಆದರೆ, ಉದ್ಘಾಟನೆಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಇದರಿಂದ ನಾಗರಿ ಕರು ತೊಂದರೆ ಅನುಭವಿಸುವಂತಾ ಗಿದೆ. ಕೂಡಲೇ, ಉದ್ಘಾಟನೆಗೆ ಉಸ್ತು ವಾರಿ ಸಚಿವರು ಹಾಗೂ ಜಿಲ್ಲಾ ಡಳಿತ ಮುಂದಾಗಬೇಕು~ ಎಂಬುದು ಸಂತೇ ಮರಹಳ್ಳಿಯ ರಮೇಶ್‌ರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.