ADVERTISEMENT

ಸುಳ್ವಾಡಿ ಕಿಚ್ಚುಗುತ್ತು ವಿಷಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 15:17 IST
Last Updated 28 ಮಾರ್ಚ್ 2019, 15:17 IST
ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಮನವಿ ಸಲ್ಲಿಸಿದರು   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತುಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವನೆ ಪ್ರಕರಣವನ್ನು ಶೀಘ್ರದಲ್ಲೇ ಇತ್ಯರ್ಥಿಪಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದುಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾನ್ಯಾಯಾಲಯಕ್ಕೆನಾಲ್ವರು ಆರೋಪಿಗಳು ಹಾಜರಾಗುತ್ತಿದ್ದಾರೆ. ಈ ಪ್ರಕರಣಕೂಡಯಾವುದೇ ರೀತಿಯ ಪರಿಣಾಮ ಬೀರದೆ ಕೆಲ ಪಟ್ಟಭದ್ರ ಹಿತಾಶಕ್ತಿಗಳಿಗೆ ಬಲಿಯಾಗುತ್ತದೆ. ವಿಷಪ್ರಸಾದ ಸೇವಿಸಿರುವ120 ಮಂದಿ ಭಕ್ತರಲ್ಲಿ12 ಮಂದಿ ಮೃತಪಟ್ಟರು. ಅವರ10 ಮಂದಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದವರಲ್ಲಿ50ಕ್ಕೂ ಹೆಚ್ಚುಮಂದಿಇದೇಸಮುದಾಯದವರು.

ಪ್ರಕರಣಗಳು ಹೆಚ್ಚು ವಿಚಾರಣೆ ಇರುವುದರಿಂದ ವಿಳಂಬವಾಗಬಾರದು. ವಿಚಾರಣೆ ವಿಳಂಬವಾದರೆಆರೋಪಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆರೋಪಿಗಳೂ ಬಲಾಢ್ಯರಾಗಿದ್ದು, ರಾಜಕೀಯ ಪ್ರಭಾವಿಗಳಾಗಿದ್ದಾರೆ ಹಾಗೂ ಮಠ ಮಾನ್ಯರ ಪ್ರಭಾವ ಬಳಸಿ ವಿಚಾರಣೆಯು ತಡವಾದರೆ ಜಾಮೀನು ಪಡೆದು ಹೊರಗೆ ಒಂದು ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಪ್ರತ್ಯೇಕ ನ್ಯಾಯಾಲಯವನ್ನು ಸಾಕ್ಷಿಗಳ ಅನುಕೂಲಕ್ಕಾಗಿ ಕೊಳ್ಳೇಗಾಲದಲ್ಲೇ ತೆರೆದು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಇದೇ ವೇಳೆ ಸಮಿತಿಯಜಿಲ್ಲಾ ಪ್ರಧಾನ ಸಂಚಾಲಕ ಕೆ.ಸಿದ್ದರಾಜು ದೊಡ್ಡಿಂದುವಾಡಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣ, ಆಲೂರು ನಾಗೇಂದ್ರ, ಪ್ರಥಮ ದರ್ಜೆ ಗುತ್ತಿಗೆದಾರ ಪುಟ್ಟಸ್ವಾಮಿ, ಸುಶೀಲ ರಾಮಸಮುದ್ರ, ಬಂಗಾರಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಸಂಚಾಲಕ ಕುಮಾರ, ಡಿ.ಮಾದಯ್ಯ, ನಂಜುಂಡಯ್ಯ, ಕೃಷ್ಣಯ್ಯ, ಶಿವಯ್ಯ, ಮಣಿಯ್ಯ, ಸಿದ್ದಯ್ಯ, ಮಹದೇವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.