ADVERTISEMENT

ಗುಂಡ್ಲುಪೇಟೆ | ಬಸ್‌ನಲ್ಲಿದ್ದ 12.6 ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:33 IST
Last Updated 27 ಫೆಬ್ರುವರಿ 2026, 8:33 IST
ಜಪ್ತಿ ಮಾಡಲಾಗಿರುವ ಗಾಂಜಾ
ಜಪ್ತಿ ಮಾಡಲಾಗಿರುವ ಗಾಂಜಾ   

ಗುಂಡ್ಲುಪೇಟೆ: ಇಲ್ಲಿಂದ ಹೊರಟಿದ್ದ ಊಟಿ ಬಸ್‌ನಲ್ಲಿ ಜನರು ಬಿಟ್ಟು ಹೋಗಿದ್ದ ಟ್ರಾಲಿ ಸೂಟ್ ಕೇಸ್  ಪರಿಶೀಲಿಸಿದಾಗ 12.6 ಕೆಜಿ ಗಾಂಜಾಇದ್ದಿದ್ದು ಬೆಳಕಿಗೆ ಬಂದಿದೆ.

ಶಿವಮೊಗ್ಗ ಡಿಪೋಗೆ ಸೇರಿದ ಬಸ್ ಬುಧವಾರದಂದು ಮೈಸೂರಿನಿಂದ ಊಟಿಗೆ ತೆರಳುವಾಗ ಗುಂಡ್ಲುಪೇಟೆ ಪಟ್ಟಣ ಬಸ್ ನಿಲ್ದಾಣದಲ್ಲಿ ಟ್ರಾಲಿ ಸೂಟ್ ಕೇಸ್ ಹಿಡಿದು ಹತ್ತಿದ್ದ ವ್ಯಕ್ತಿ ಊಟಿಯಲ್ಲಿ ಸೂಟ್ ಕೇಸ್‌ ಬಿಟ್ಟು ಪರಾರಿಯಾಗಿದ್ದಾನೆ. ಗುರುವಾರದಂದು ಬಸ್ ನಿರ್ವಾಹಕ ಉಮೇಶ್ ಹಾಗೂ ಚಾಲಕ ವಿಜಯಕುಮಾರ್ ಡಿಪೋ ಮ್ಯಾನೇಜರ್ ಗೆ ಮಾಹಿತಿ ಕೊಟ್ಟು ಗುಂಡ್ಲುಪೇಟೆ ಠಾಣೆಯಲ್ಲಿ ಪೊಲೀಸರ ಸಮಕ್ಷಮ ಬ್ಯಾಗ್ ಪರಿಶೀಲನೆ ನಡೆಸಿದಾಗ 12.645 ಗ್ರಾಂ ಗಾಂಜಾ ಪತ್ತೆಯಾಗಿದೆ. ಗುಂಡ್ಲುಪೇಟೆ ಠಾಣೆ ಪ್ರಕರಣ  ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT