ADVERTISEMENT

ನನ್ನ ಶಾಲೆ ನನ್ನ ಹೆಮ್ಮೆ: ಚಲನಚಿತ್ರ ನಟ ಗಣೇಶ್ ರಾವ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 14:08 IST
Last Updated 17 ಆಗಸ್ಟ್ 2024, 14:08 IST
ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಮಕ್ಕಳಿಗೆ ಜಿ.ಆರ್ ಫಿಲ್ಮ್ಸ್‌ಸಂಸ್ಥೆ ಇಲ್ಲಿನ ಸರ್ಕಾರಿ ಶಾಲೆಯಉಚಿತ ಕ್ರೀಡಾ ಸಾಮಗ್ರಿಗಳು, ಸಮವಸ್ತ್ರಗಳು ಹಾಗೂ ಪುಸ್ತಕ ವಿತರಣೆಯನ್ನು  ನಟ ಗಣೇಶ್ ರಾವ್ ಕೇಸರ್ಕರ್ ಚಾಲನೆ ನೀಡಿದರು.
ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಮಕ್ಕಳಿಗೆ ಜಿ.ಆರ್ ಫಿಲ್ಮ್ಸ್‌ಸಂಸ್ಥೆ ಇಲ್ಲಿನ ಸರ್ಕಾರಿ ಶಾಲೆಯಉಚಿತ ಕ್ರೀಡಾ ಸಾಮಗ್ರಿಗಳು, ಸಮವಸ್ತ್ರಗಳು ಹಾಗೂ ಪುಸ್ತಕ ವಿತರಣೆಯನ್ನು  ನಟ ಗಣೇಶ್ ರಾವ್ ಕೇಸರ್ಕರ್ ಚಾಲನೆ ನೀಡಿದರು.   

ಕೊಳ್ಳೇಗಾಲ: ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹ ಸಹಕರಿಸಬೇಕು ಎಂದು ನಟ ಗಣೇಶ್ ರಾವ್ ಕೇಸರ್ಕರ್ ಹೇಳಿದರು.

ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಂಗಳೂರಿನ ಜಿ.ಆರ್. ಫಿಲಮ್ಸ್ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುಗೆ ನೀಡಿದ ಕ್ರೀಡಾ ಸಾಮಗ್ರಿ , ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಉದ್ದೇಶ.   ನಾನು ಇದೇ ಶಾಲೆಯಲ್ಲಿ ಓದಿ ರಂಗಭೂಮಿ, ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ.  ನನ್ನ ಶಾಲೆ ನನ್ನ ಹೆಮ್ಮೆ.  ಶಾಲೆಯ ಮಕ್ಕಳಿಗೆ ನಾನು ಉಚಿತ ಸಾಮಗ್ರಿಗಳನ್ನು ವಿತರಣೆ  ಮಾಡುತ್ತಿದ್ದೇನೆ. ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಇಚ್ಛ ಇದೆ ಎಂದರು.  ಶಾಲೆಯನ್ನು ನನಗೆ ದತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದರು.  ಈ ಊರಲ್ಲೇ ಹುಟ್ಟಿ ಬೆಳೆದವನು.   ಶಾಲೆಯನ್ನುಇನ್ನೂ ಅಭಿವೃದ್ಧಿ ಮಾಡಬೇಕು ಎಂಬ ಕನಸನ್ನು ಕಂಡಿದ್ದೇನೆ ಎಂದರು.

ADVERTISEMENT

  ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಬಿ.ಆರ್.ಸಿ ಮಹದೇವಕುಮಾರ್,  ಮುಖ್ಯ ಶಿಕ್ಷಕ ವಾಸು, ಗ್ರಾಮದ ಮುಖಂಡರು ಹಾಗೂ ಗಣೇಶ್  ಕುಟುಂಬದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.