ADVERTISEMENT

ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರಾಗಿ ಆನಂದ್ ಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:07 IST
Last Updated 27 ಏಪ್ರಿಲ್ 2025, 16:07 IST
ಕೊಳ್ಳೇಗಾಲದ ಡಾ.ಬಿ‌.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿ ನಾಗೇಶ್ ಅವರು ಪ್ರಮಾಣ ಪತ್ರವನ್ನು ನೀಡಿದರು
ಕೊಳ್ಳೇಗಾಲದ ಡಾ.ಬಿ‌.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿ ನಾಗೇಶ್ ಅವರು ಪ್ರಮಾಣ ಪತ್ರವನ್ನು ನೀಡಿದರು   

ಕೊಳ್ಳೇಗಾಲ: ಇಲ್ಲಿನ ಡಾ.ಬಿ‌.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ನೂತನ ಅಧ್ಯಕ್ಷರಾಗಿ ಆನಂದ್ ಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಕಿರಣ್ ಅವರು ಆಯ್ಕೆಯಾದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 432 ಮತಗಳ ಪೈಕಿ 358 ಮತಗಳು ಚಲಾವಣೆಯಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಆನಂದಮೂರ್ತಿ 207 ಮತ ಪಡೆದರು. ಇವರ ವಿರುದ್ಧ ಸ್ಪರ್ಧಿಸಿದ ಕೆ.ನಾಗರಾಜ್ 81, ಜೆ.ನಿಂಗರಾಜು 7, ಸಿದ್ದಾರ್ಥ 40 ಮತಗಳನ್ನು ಪಡೆದು ಸೋಲನ್ನು ಕಂಡರು. 23 ಮತಗಳು ತಿರಸ್ಕೃತಗೊಂಡವು.

ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಿರಣ್ ಎಸ್., 94 ಮತಗಳನ್ನು ಪಡೆದರು. ಇವರ ವಿರುದ್ಧ ಸ್ಪರ್ಧಿಸಿದ್ದ ಪಿ.ಜಗದೀಶ್ 22, ಮೂರ್ತಿ ಬಿ., 76, ರಾಜಶೇಖರಮೂರ್ತಿ ಎಸ್. 35, ಶಿವರಾಜು ಬಿ. 22, ಶ್ರೀಕಾಂತ್ 6, ಹುಚ್ಚಪ್ಪ 66 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.  36 ಮತಗಳು ತಿರಸ್ಕೃತಗೊಂಡಿದೆ.

ADVERTISEMENT

ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಾಪಣ್ಣ 224 ಮತಗಳನ್ನು ಪಡೆದರು. ಇವರ ವಿರುದ್ಧ ಸ್ಪರ್ಧಿಗಳು ವಿಜಯಕುಮಾರ್ 84, ಸನತ್ ಕುಮಾರ್ 22 ಮತಗಳ ಪಡೆದು ಪರಾಭವಗೊಂಡು 28 ಮತಗಳು ತಿರಸ್ಕೃತವಾದವು. 

ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿಧರ್ 217, ಖಜಾಂಚಿಯಾಗಿ ಸ್ಪರ್ಧಿಸಿದ್ದ ರಾಜೇಶ್‌ ಕೆ.  205 ಮತಗಳನ್ನು ಪಡೆದು ಜಯಗಳಿಸಿದರು ಎಂದು ಚುನಾವಣಾಧಕಾರಿ ನಾಗೇಶ್ ಅವರು ಘೋಷಣೆ ಮಾಡಿದರು.

ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.