ADVERTISEMENT

ಸಂತೇಮರಹಳ್ಳಿ: ಚಾಮುಲ್ ಬಾಕಿ ಹಣ ಬಿಡುಗಡೆಗಾಗಿ ಕೆಎಂಎಫ್‌ ಅಧ್ಯಕ್ಷರಿಗೆ ಮನವಿ 

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 14:53 IST
Last Updated 21 ಮಾರ್ಚ್ 2025, 14:53 IST
ಬಾಕಿ ಅನುದಾನ ಬಿಡುಗಡೆಗಾಗಿ ಸಂತೇಮರಹಳ್ಳಿ ಸಮೀಪದ ಕುದೇರು ಚಾಮುಲ್ ಆಡಳಿತ ಮಂಡಳಿ ವತಿಯಿಂದ ಕೆಎಂಎಫ್ ಅಧ್ಯಕ್ಷ ಭೀಮಾಯ್ಕ್‌ ಅವರಿಗೆ  ಮನವಿ ಸಲ್ಲಿಸಲಾಯಿತು
ಬಾಕಿ ಅನುದಾನ ಬಿಡುಗಡೆಗಾಗಿ ಸಂತೇಮರಹಳ್ಳಿ ಸಮೀಪದ ಕುದೇರು ಚಾಮುಲ್ ಆಡಳಿತ ಮಂಡಳಿ ವತಿಯಿಂದ ಕೆಎಂಎಫ್ ಅಧ್ಯಕ್ಷ ಭೀಮಾಯ್ಕ್‌ ಅವರಿಗೆ  ಮನವಿ ಸಲ್ಲಿಸಲಾಯಿತು   

ಸಂತೇಮರಹಳ್ಳಿ: ಕುದೇರು ಚಾಮುಲ್ ಆಡಳಿತ ಮಂಡಳಿ ವತಿಯಿಂದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್‌ ಅವರಿಗೆ ಬಾಕಿ ಅನುದಾನ ಬಿಡುಗಡೆಗಾಗಿ ಬೆಂಗಳೂರಿನಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಕುದೇರು ಚಾಮುಲ್ ಈಗಾಗಲೇ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಡೆ ಹೋಗುವ ನಿಟ್ಟಿನಲ್ಲಿ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಒದಗಿಸಿಕೊಡಬೇಕು. ಜತೆಗೆ ಚಾಮುಲ್ ಘಟಕದಲ್ಲಿ ಪ್ರತ್ಯೇಕವಾಗಿ ಐಸ್‍ಕ್ರೀಂ ಘಟಕ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಐಸ್‍ಕ್ರೀಂ ಘಟಕ ಆರಂಭಿಸಲು ಕೆಎಂಎಫ್ ವತಿಯಿಂದ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್‌ ಮಾತನಾಡಿ, ಕುದೇರು ಚಾಮುಲ್‍ಗೆ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ. ಹಾಗೂ ಪ್ರತ್ಯೇಕವಾಗಿ ಐಸ್‍ಕ್ರೀಂ ಘಟಕ ಆರಂಭಿಸಲು ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. 

ADVERTISEMENT

ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜ್‍ಕುಮಾರ್, ನಿರ್ದೇಶಕರಾದ ಸದಾಶಿವಮೂರ್ತಿ ಮಹದೇವಸ್ವಾಮಿ, ಸಾಹುರ್ ಆಹಮ್ಮದ್, ಸದಾಶಿವಮೂರ್ತಿ, ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಆಡಳಿತ ವ್ಯವಸ್ಥಾಪಕ ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.