ADVERTISEMENT

‘5 ವರ್ಷದಲ್ಲಿ ಚಾಮರಾಜನಗರ ಇನ್ನಷ್ಟು ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 28 ಮೇ 2024, 14:48 IST
Last Updated 28 ಮೇ 2024, 14:48 IST
ಚಾಮರಾಜನಗರದಲ್ಲಿ ನಡೆದ ಕೈಗಾರಿಕೆಗಳಲ್ಲಿ ಸೋಲಾರ್‌ ಬಳಕೆ ಕುರಿತ ಅರಿವು ಕಾರ್ಯಕ್ರಮವನ್ನು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಲಿಂಗಯ್ಯ ಉದ್ಘಾಟಿಸಿದರು. ಯಶವಂತ, ಎ.ಜಯಸಿಂಹ, ಜಿ.ಎಂ.ಹೆಗಡೆ, ಪ್ರಭಾಕರ್‌ ಇತರರು ಪಾಲ್ಗೊಂಡಿದ್ದರು 
ಚಾಮರಾಜನಗರದಲ್ಲಿ ನಡೆದ ಕೈಗಾರಿಕೆಗಳಲ್ಲಿ ಸೋಲಾರ್‌ ಬಳಕೆ ಕುರಿತ ಅರಿವು ಕಾರ್ಯಕ್ರಮವನ್ನು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಲಿಂಗಯ್ಯ ಉದ್ಘಾಟಿಸಿದರು. ಯಶವಂತ, ಎ.ಜಯಸಿಂಹ, ಜಿ.ಎಂ.ಹೆಗಡೆ, ಪ್ರಭಾಕರ್‌ ಇತರರು ಪಾಲ್ಗೊಂಡಿದ್ದರು    

ಚಾಮರಾಜನಗರ: ಇನ್ನು ಐದು ವರ್ಷಗಳಲ್ಲಿ ಚಾಮರಾಜನಗರ ಬಹಳಷ್ಟು ಮುಂದುವರಿಯಲಿದೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ ಮಂಗಳವಾರ ಹೇಳಿದರು. 

ನಗರದಲ್ಲಿ ಆರ್ಬ್‌ ಎನರ್ಜಿ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಮ್ಮಿಕೊಂಡಿದ್ದ ಕೈಗಾರಿಕೆಗಳಲ್ಲಿ ಸೋಲಾರ್‌ ಬಳಕೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.  

‘ಈಗಾಗಲೇ ಕೈಗಾರಿಕಾ ಪ್ರದೇಶದಲ್ಲಿ 1,460 ಎಕರೆ ಪ್ರದೇಶದಲ್ಲಿ ಕೆಲಸ ನಡೆಯುತ್ತಿದ್ದು ಇನ್ನು 900 ಎಕರೆ ಬಾಕಿ ಇದೆ. 2,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಬಂದಿದ್ದೇ ಅದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಮತ್ತು ಜಿಲ್ಲೆ ಬೆಳೆಯುತ್ತದೆ’ ಎಂದು ತಿಳಿಸಿದರು.

ADVERTISEMENT

‘ಸೌರಶಕ್ತಿಯಿಂದ ಬಹಳಷ್ಟು ಉಪಯೋಗ ಇದ್ದು, ಇದಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಸೋಲಾರ್‌ ಬಳಕೆಯಿಂದ ಪರಿಸರ ಮಾಲಿನ್ಯ ತಪ್ಪುತ್ತದೆ. ಕೈಗಾರಿಕೆಗಳು ಸೋಲಾರ್‌ ಬಳಕೆಗೆ ಮುಂದಾಗಬೇಕು’ ಎಂದರು. 

ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಎ.ಜಯಸಿಂಹ ಮಾತನಾಡಿ, ‘ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪುಟ್ಟ ಜನರಿಗೂ ಜಾಗ ಸಿಗುವಂತಾಗಬೇಕು. ಸಂತೇಮರಹಳ್ಳಿ ಸಮೀಪ ಸಾಕಷ್ಟು ಜಾಗ ಇದ್ದು ಅಲ್ಲೂ ಕೈಗಾರಿಕೆಗಳು ಬಂದು ಆ ಪ್ರದೇಶವೂ ಬೆಳೆಯುವಂತಾಗಬೇಕು’ ಎಂದರು.

ಆರ್ಬ್‌ ಎನರ್ಜಿ ವ್ಯವಸ್ಥಾಪಕ ಯಶವಂತ್‌ ಅವರು ಉಪನ್ಯಾಸ ನೀಡಿದರು. 

ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್, ಕರಿಕಲ್ಲು ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ಎಫ್.ಕೆ.ಸಿ.ಸಿ.ಐ ಜಿಲ್ಲಾ ಅಧ್ಯಕ್ಷ ಪ್ರಭಾಕರ್, ಜವಳಿ ಇಲಾಖೆ ಉಪನಿರ್ದೇಶಕ ಶಶಿಧರ್, ಇಮ್ರಾನ್ ಅಹಮದ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.