ADVERTISEMENT

ಕೊಳ್ಳೇಗಾಲ | ತಾಲ್ಲೂಕು ಬಾಬು ಜಗಜೀವನ್ ರಾಮ್ ಒಕ್ಕೂಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 7:40 IST
Last Updated 8 ಫೆಬ್ರುವರಿ 2026, 7:40 IST
ಕೊಳ್ಳೇಗಾಲ ತಾಲ್ಲೂಕು ಬಾಬು ಜಗಜೀವನ್ ರಾಮ್ ಒಕ್ಕೂಟ ಸಂಘದ ನೂತನ ಪದಾಧಿಕಾರಿಗಳನ್ನು ಶನಿವಾರ ಅಭಿನಂದಿಸಲಾಯಿತು
ಕೊಳ್ಳೇಗಾಲ ತಾಲ್ಲೂಕು ಬಾಬು ಜಗಜೀವನ್ ರಾಮ್ ಒಕ್ಕೂಟ ಸಂಘದ ನೂತನ ಪದಾಧಿಕಾರಿಗಳನ್ನು ಶನಿವಾರ ಅಭಿನಂದಿಸಲಾಯಿತು   

ಕೊಳ್ಳೇಗಾಲ: ತಾಲ್ಲೂಕು ಬಾಬು ಜಗಜೀವನ್ ರಾಮ್ ಒಕ್ಕೂಟ ಸಂಘದ ನೂತನ ಪದಾಧಿಕಾರಿಗಳನ್ನು ಶನಿವಾರ ಜಿಲ್ಲಾ ಸಮಿತಿ ಆಯ್ಕೆ ಮಾಡಿತು. ನಗರದ ಗುರುಭವನದಲ್ಲಿ ಕರೆದಿದ್ದ ಸಭೆಯಲ್ಲಿ ಆಯ್ಕೆಯ ಪ್ರಕ್ರಿಯೆ ನಡೆಯಿತು.

ತಾಲ್ಲೂಕು ಗೌರವಧ್ಯಕ್ಷ ಪಿ.ಶಿವಮಲ್ಲು, ಅಧ್ಯಕ್ಷರಾಗಿ ಬಿ.ಗೋಪಾಲ್, ಉಪಾಧ್ಯಕ್ಷ ಸುರೇಶ್ ತಿಮ್ಮರಾಜೀಪುರ, ಬಾಪುನಗರ ಸಿದ್ದಪ್ಪ, ಹಿಂದ್ವಾಡಿ ಮುತ್ತುರಾಜು, ಪ್ರಧಾನ ಕಾರ್ಯದರ್ಶಿ ಸಿ.ಮಧು, ಸಂಘಟನಾ ಕಾರ್ಯದರ್ಶಿ ಮಹೇಶ್ ಟಗರಪುರ, ವಸಂತ್ ಕುಮಾರ್, ಖಜಾಂಚಿ ಮುತ್ತುರಾಜ್, ಜಂಟಿ ಕಾರ್ಯದರ್ಶಿ ಕಾಮಗೆರೆ ನಿಂಗರಾಜು, ರಾಚಪ್ಪ ಆಲಹಳ್ಳಿ, ಸಂಚಾಲಕ ಸಿದ್ದರಾಜು ಬಾಪುನಗರ, ನಿರ್ದೇಶಕರು ಮಹದೇವ.ಸಿ ಸರಗೂರು, ಕುಮಾರ ಕರಿಯನಪುರ, ಸಿದ್ದಲಿಂಗಸ್ವಾಮಿ, ಸೋಮಶೇಖರ್ ಮುಳ್ಳೂರು, ಕಾನೂನು ಸಲಹೆಗಾರ ವಕೀಲ ರಾಜೇಂದ್ರ ಬೂದಿತಿಟ್ಟು, ವಕೀಲ ನಟರಾಜು ತಿಮ್ಮರಾಜೀಪುರ, ದೊಡ್ಡಿಂದುವಾಡಿ ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಯಿತು.

ನಂತರ ನೂತನ ಅಧ್ಯಕ್ಷ ಗೋಪಾಲ್ ಮಾತನಾಡಿ, ಬಾಬು ಜಗಜೀವನ್ ರಾಮ್ ಒಕ್ಕೂಟ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಯೊಬ್ಬ ಪದಾಧಿಕಾರಿಗಳು ಒಗ್ಗಟ್ಟಾಗಿ ನಿಂತು ಸಂಘವನ್ನು ಗಟ್ಟಿಗೊಳಿಸಬೇಕು. ಇದರ ಜೊತೆಗೆ ನಮ್ಮ ಸಮುದಾಯದ ಕೆಲಸಗಳನ್ನು ಸಹ ನೋಡಿಕೊಳ್ಳಬೇಕು. ಸಂಘ ಮಾಡುವುದು ದೊಡ್ಡದಲ್ಲ ಅದನ್ನು ನಿರ್ವಹಣೆ ಮಾಡಿಕೊಂಡು ಹೋಗುವುದು ಬಹಳ ಕಷ್ಟ, ಹಾಗಾಗಿ ಎಲ್ಲರೂ ಸಹಕಾರದಿಂದ ಸಂಘವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬೇಕು ಎಂದರು.

ಬಾಬು ಜಗಜೀವನ್ ರಾಮ್ ಒಕ್ಕೂಟ ಸಂಘ ಚಾಮರಾಜನಗರ ಜಿಲ್ಲಾ ಗೌರವಧ್ಯಕ್ಷ ಬಸವನಪುರ ರಾಜಶೇಖರ್, ಜಿಲ್ಲಾಧ್ಯಕ್ಷ ಎಚ್.ಎಚ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ರಾಮಸಮುದ್ರ, ಖಜಾಂಚಿ ಬಸವರಾಜು ತಿಮ್ಮರಾಜೀಪುರ, ಜಿಲ್ಲಾ ಉಪಾಧ್ಯಕ್ಷ ಕೆನರಾ ಬ್ಯಾಂಕ್ ಬಸವರಾಜು, ಬೂದಿತಿಟ್ಟು ರಾಜೇಂದ್ರ, ಎಲ್.ಐ.‌ಸಿ ರಾಜಣ್ಣ ಬಾಪುನಗರ, ಆಡಿಟರ್ ರೇವಣ್ಣ, ಹಸಕೂಲಿ ಸಿದ್ದಯ್ಯ, ಟಗರಪುರ ಬಸವರಾಜು, ಡಾ.ಲೋಕೇಶ್  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.