ಚಾಮರಾಜನಗರ: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ಸಾಲಿನ ಬಗರ್‌ಗಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಬಗರ್‌ಗಹುಕುಂ ಸಾಗುವಳಿ ಪತ್ರ ಪಡೆಯಲು ಹರವೆ, ಹರದನಹಳ್ಳಿ, ಕಸಬಾ ಹೋಬಳಿಯ ವಿವಿಧ ಗ್ರಾಮಗಳ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಸಲ್ಲಿಕೆಯಾದ 16 ಅರ್ಜಿಗಳಲ್ಲಿ 4 ಅರ್ಜಿಗಳು ಹಿಂದೆಯೇ ಸಲ್ಲಿಕೆಯಾಗಿದ್ದು, ಅನರ್ಹ ಒಂದು ಅರ್ಜಿ ಹೊರತುಪಡಿಸಿ 15 ಅರ್ಜಿಗಳನ್ನು ಶಾಸಕರು ಪರಿಶೀಲಿಸಿದರು.
ಬಳಿಕ ಮಾತನಾಡಿ, ಸಲ್ಲಿಕೆಯಾದ 16 ಅರ್ಜಿಗಳಲ್ಲಿ 4 ಮಂದಿ ಅರ್ಜಿದಾರರಿಗೆ ಸಕಾಲಕ್ಕೆ ಸಾಗುವಳಿ ಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಗರ್‌ಗಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಬಿಸಲವಾಡಿ ರವಿ, ಮಲ್ಲಿಕ್, ಚನ್ನೇಗೌಡ, ಮಹಾಲಿಂಗು, ತಹಶೀಲ್ದಾರ್ ಗಿರಿಜಾ, ಆರ್‌ಐಗಳಾದ ರಾಜಶೇಖರ ಮೂರ್ತಿ, ಷಡಕ್ಷರಿ, ವಿನಯ್, ಗುರುಸಿದ್ದಪ್ಪ, ಭೂಮಿ ಸಮಾಲೋಚಕ ರಾಜೇಂದ್ರ ನಾಯಕ್, ರವೀಂದ್ರ ಸೇರಿ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.