ಕೊಳ್ಳೇಗಾಲ: ತ್ಯಾಗ, ಬಲಿದಾನಗಳ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬ ಈದ್-ಉಲ್-ಅಝಾ (ಬಕ್ರೀದ್) ಹಬ್ಬವನ್ನು ಶನಿವಾರ ಆಚರಿಸಲಾಯಿತು.
ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ಬೆಳಿಗ್ಗೆ 8 ಗಂಟೆಗೆ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆ ಹೊರಟು ರಸ್ತೆಯುದ್ದಕ್ಕೂ ಅಲ್ಲಾಹನ ಸ್ಮರಣೆಯ ವಾಕ್ಯಗಳನ್ನು ಪಠಿಸುತ್ತಾ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಧರ್ಮಗುರು ಹಜರತ್ ಅಬ್ದುಲ್ ತವಾಬ್ ಅವರು ಸಾಮೂಹಿಕ ನಮಾಜ್ ನೆರವೇರಿಸಿ ಕೊಟ್ಟರು. ಬಳಿಕ ಧರ್ಮ ಗುರು ಮೌಲಾನ ಅಂಜದ್ ಅಹಮದ್ ಅವರು ಧರ್ಮ ಪ್ರವಚನ ನೀಡಿದರು.
ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯಗಳನ್ನು ಕೋರಿದರು. ಬಳಿಕ ತಮ್ಮನ್ನು ಅಗಲಿದವರ ಸಮಾಧಿಗಳಿಗೆ ಪುಷ್ಪಗಳನ್ನು ಚೆಲ್ಲಿ ಅವರ ಮುಕ್ತಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಮುಸ್ಲಿಮರ ಪ್ರತಿ ಮನೆಯಲ್ಲೂ ಒಂದೊಂದು ಕುರಿಗಳನ್ನು ಕತ್ತರಿಸಿ ಮಾಂಸವನ್ನು ವಿತರಣೆ ಮಾಡಿದರು. ಇದಾದ ಬಳಿಕ ರಾತ್ರಿ ಬಗೆ ಬಗೆಯ ತಿಂಡಿ ತಿನಿಸು ಬಿರಿಯಾನಿ ಚಿಕನ್ ಕಬಾಬ್ ಮಟನ್ ಫ್ರೈ, ಸೇರಿದಂತೆ ಇನ್ನಿತರ ಊಟಗಳನ್ನು ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.