ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಆಕರ್ಷಣೆಯ ಕೇಂದ್ರವಾಗಿ, ತನ್ನ ನಾಲ್ಕು ಮರಿಗಳ ಜೊತೆ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದ ತಾಯಿ ಹುಲಿಯ ಹಿಂಗಾಲುಗಳಿಗೆ ಗಾಯವಾಗಿದ್ದು, ಕುಂಟುತ್ತಾ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಬೇಟೆಯಾಡುವ ಸಂದರ್ಭದಲ್ಲಿ ಗಾಯ ಮಾಡಿಕೊಂಡಿರುವ ಸಾಧ್ಯತೆ ಇದೆ. ಅರಣ್ಯ ಸಿಬ್ಬಂದಿ ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.
‘ಬುಧವಾರ ಬೆಳಿಗ್ಗೆ ತಾಯಿಯೊಂದಿಗೆ ಮರಿಗಳನ್ನು ನೋಡಿದ್ದು, ಅವು ಆರೋಗ್ಯವಾಗಿವೆ. ಅಗತ್ಯವಿದ್ದರೆ ತಾಯಿ ಹುಲಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭಾಕರ್ ತಿಳಿಸಿದರು.
ಸಫಾರಿ ಜೋನ್ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ತಾಯಿ–ಮರಿ ಹುಲಿಗಳ ಚಿನ್ನಾಟದ ದೃಶ್ಯಗಳನ್ನು ಪ್ರವಾಸಿಗರು ಇತ್ತೀಚೆಗೆ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.