ADVERTISEMENT

ಬಂಡೀಪುರ: ಮಾನವ–ಪ್ರಾಣಿ ಸಂಘರ್ಷ ತಡೆಗೆ ಸಿಬ್ಬಂದಿ ನಿಯೋಜನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಚೇರಿಯಲ್ಲಿ ಕಾರ್ಯವರದಿ ಮಾಡಿಕೊಳ್ಳಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 2:33 IST
Last Updated 2 ನವೆಂಬರ್ 2025, 2:33 IST
<div class="paragraphs"><p>ಬಂಡೀಪುರ ಅರಣ್ಯ</p></div>

ಬಂಡೀಪುರ ಅರಣ್ಯ

   

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಯಲು ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರನ್ನು ತಾತ್ಕಾಲಿಕವಾಗಿ ಒಂದು ವಾರದ ಅವಧಿಗೆ ನಿಯೋಜಿಸಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಉದಯ್‌ ಕುಮಾರ್, ಎ.ವಿ.ಶಿವಶಂಕರ್, ಜಿ.ಶರಣ್‌, ಮನೋಜ್ ಕುಮಾರ್, ಭಾನುಪ್ರಕಾಶ್‌, ಚಿದಾನಂದ, ಮುಥುನ್ ಗೌಡ, ಮನೋಜ್‌, ಶ್ರೀ ಹಾಲೇಶ ಗೊರವರ, ಶ್ರೀನಿವಾಸ ಮೂರ್ತಿ, ಟಿ.ಸಿದ್ದರಾಜು, ಅಮೃತ್ ದೇಸಾಯಿ, ಶರತ್‌, ಕಿರಣ್‌, ವಿಜಯಕುಮಾರ್, ಚರಣ್ ಕುಮಾರ್, ಪ್ರಕಾಶ್, ಪುನೀತ್ ಕುಮಾರ್‌, ಮುನಿಸ್ವಾಮಿ, ಶ್ರೀನಾಥ ರೆಡ್ಡಿ.

ADVERTISEMENT

ಗಸ್ತು ಅರಣ್ಯ ಪಾಲಕರಾದ ಬಸವರಾಜ್, ಶೇಖ್‌ ಶಾ ವಲಿ, ಶಿವಕುಮಾರ್‌, ಶ್ರೀನಾಥ್‌ ಬಿ.ಎಸ್‌, ಮಲ್ಲಪ್ಪ ಯಮನಪ್ಪ ಲೊಟಗೇರಿ, ದೇವರಾಜ್‌ ಬಾನರ್, ಬಿ.ವಿ.ಬಾಲಕೃಷ್ಣ, ನಿಂಗಯ್ಯ, ತೌಫಿಕ್ ಬಾಷಾ, ಕೆ.ರಮೇಶ, ಕೆ.ಪ್ರಕಾಶ್‌. ಶಶಿಕುಮಾರ್ ಎಲ್‌, ಬಸಲಿಂಗಪ್ಪ, ಸಚಿನ್ ಸನದಿ, ಮಹಿಬ್ ಸುಬಾನಿ ಖಾಸಿಮ್‌ಸಾಬ್ ವಾಲೀಕರ್, ಬಿ.ಕಾರ್ತಿಕ್‌, ಕೊಟ್ರೇಶ್‌ ಸುರೇಶಪ್ಪ ಅಂಬಳಿ, ತಿಪ್ಪೇಸ್ವಾಮಿ, ಚೇತನ್‌ ಆರ್‌, ಬಸವರಾಜ್‌, ಬಿ.ನಾಗರಾಜ, ಕೆ.ವಿ.ಲೋಕೇಶ್‌, ಸುದೀಪ ತಲಗೇರಿ, ಮಲ್ಲಿಕಾರ್ಜುನ್ ಪಿ.ಬೆನಲ್‌, ಹನುಮಂತ ಮಲ್ಲಪ್ಪನವರ್, ಚೆನ್ನವೀರಪ್ಪ ಪೂಜಾರ, ಮೋಕ್ಷಜ್ಞ, ಪ್ರದೀಪ ಬಿ.ಎನ್‌, ಎಂ.ಜೆ.ಅಶ್ವಿನಿ ಅವರನ್ನು ನಿಯೋಜಿಸಲಾಗಿದೆ.

ಅಧಿಕಾರಿಗಳನ್ನು ಹಾಲಿ ಹುದ್ದೆಗಳಿಂದ ಕಾರ್ಯವಿಮುಕ್ತಿಗೊಳಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಚೇರಿಯಲ್ಲಿ ಕಾರ್ಯ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಕಾರ್ಯವರದಿ ಮಾಡಿಕೊಳ್ಳದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಪರ್ಯಾಯ ವ್ಯವಸ್ಥೆ ಮಾಡುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮೈಸೂರು ವೃತ್ತದಿಂದಲೂ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು ಹಾಗೂ ಅರಣ್ಯ ವೀಕ್ಷಕರನ್ನು ನ.15ರವರೆಗೂ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.

ಸುಂದರ್‌ ಬಿ.ಎನ್‌, ಸಂಜೀವ್ ಪಾಟೀಲ್‌, ಮಹೇಶ್ ಬನ್ನೇನವರ್, ಉಮೇಶ್ ಸಣ್ಣಕ್ಕಿ, ವೆಂಕಟೇಶ್‌, ಶಿವಪ್ಪ, ಬಿ.ಎ.ಸತೀಶ್‌, ಎಚ್‌.ಎನ್‌.ಮಹೇಶ್‌, ನಿರಂಜನ್‌ ಶ್ರೀಕಾಂತ್ ಕಟ್ಟಿ, ಸಂತೋಷ್ ನಾಯಕ್‌, ಸಣ್ಣ ಈರೇಶ್‌, ಗಗನ ಗೋವಿಂದ್‌, ನಾಗರಾಜ್ ಶ್ರೀಖಂಡೆ, ಮಂಜುನಾಥ್ ಟಿ.ಎಸ್‌.ಸಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ಎ.ಎಂ.ಮಂಜುನಾಥ್‌, ದಿವಾಕರ್ ಬಿ.ಎಸ್‌, ಯು.ಗಣೇಶ್‌, ಪ್ರಸನ್ನ ಕುಮಾರ್, ವಿಲಾಸ್‌ ರಾವ್ ಪವಾರ್.

ಹರೀಶ್ ಎಲ್‌, ಪ್ರಸಾದ್ ಎಚ್‌.ಆರ್‌,ನಟರಾಜ ಮುದುಕಣ್ಣನವರ, ವೀರೇಶ್‌ ಕೆಎಸ್‌, ಸಿ.ಕೆ.ಕುಮಾರ್‌, ಕುಮಾರ್ ಬಿ.ಎನ್‌, ಗಿರೀಶ್ ಕನ್ನಗೊನಹಳ್ಳ, ಗಂಗಾಧರ್ ಬಿ.ಎಸ್‌, ಕುಶಾಲ್ ಜಾದವ್‌, ಲೋಕೇಶ್ ಬಿ.ಸಿ, ಶ್ರೀಧರ್, ಧರ್ಮೇಂದ್ರ ವಿ.ಆರ್‌, ನಾಗರಾಜು ಬಿ.ಎಂ, ಶ್ರವಣ್ ಕುಮಾರ್, ಕೋಟೇಶ್ ಪೂಜಾರ್, ಯೋಗೇಶ್‌, ಚೇತನ್ ಕುಮಾರ್, ಸೈಯದ್ ಇಮ್ರಾನ್‌, ಮಧುಪ್ರಸಾದ್, ನೂರ್ ಪಾಶಾ, ಪ್ರಜ್ವಲ್‌, ಶೈಲೇಶ್‌, ಸಂದೀಪ್‌, ಕೆ.ಟಿ.ರವೀಂದ್ರ, ಪ್ರಮೋದ್, ಓ.ಟಿ.ಮಂಜುನಾಥ್‌, ಸತೀಶ್ ಎಚ್‌.ಸಿ, ಮಂಚೇಶ್‌, ದಿಲೀಪ, ಚೇತನ್‌ ಅವರನ್ನು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.