ADVERTISEMENT

ಬಹಿಷ್ಕಾರ: ಸಂತ್ರಸ್ತರ ಮನೆಗೆ ಅಧಿಕಾರಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 20:52 IST
Last Updated 12 ಡಿಸೆಂಬರ್ 2024, 20:52 IST
ಚಾಮರಾಜನಗರ ತಾಲ್ಲೂಕಿನ ಲಿಂಗರಾಜಪುರದಲ್ಲಿ ಬಹಿಷ್ಕಾರಕ್ಕೊಳಗಾಗಿರುವ ಗೋವಿಂದ ಶೆಟ್ಟಿ ಅವರ ಮನೆಗೆ ಗುರುವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು
ಚಾಮರಾಜನಗರ ತಾಲ್ಲೂಕಿನ ಲಿಂಗರಾಜಪುರದಲ್ಲಿ ಬಹಿಷ್ಕಾರಕ್ಕೊಳಗಾಗಿರುವ ಗೋವಿಂದ ಶೆಟ್ಟಿ ಅವರ ಮನೆಗೆ ಗುರುವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು   

ಚಾಮರಾಜನಗರ: ತಾಲ್ಲೂಕಿನ ಲಿಂಗರಾಜಪುರದಲ್ಲಿ ಬಹಿಷ್ಕಾರಕ್ಕೊಳಗಾದ ಉಪ್ಪಾರ ಸಮುದಾಯದ ಗೋವಿಂದಶೆಟ್ಟಿ ಅವರ ಕುಟುಂಬ ಮತ್ತು ಬಹಿಷ್ಕಾರದ ಬೆದರಿಕೆ ಎದುರಿಸುತ್ತಿರುವ ಸಿದ್ದರಾಜು ಅವರ ಕುಟುಂಬದ ಸದಸ್ಯರನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಗುರುವಾರ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು.

ಎರಡೂ ಕುಟುಂಬಗಳ ಸದಸ್ಯರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಬಹಿಷ್ಕಾರ ಸಂಬಂಧ ಸಂತ್ರಸ್ತರು ನೀಡಿರುವ ದೂರುಗಳು ಹಾಗೂ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಯಿತು.

ನಂತರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಿದ್ದರಾಜು, ‘ಉಪ್ಪಾರ ಸಮುದಾಯದಲ್ಲಿ ಬಹಿಷ್ಕಾರದಂತಹ ಅಮಾನವೀಯ ಪದ್ಧತಿ ಇಂದಿಗೂ ಜೀವಂತವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೊಂದವರಿಗೆ ನ್ಯಾಯ ಕೊಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

Quote - ಘಟನೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಶಿಲ್ಪಾ ನಾಗ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.