ಚಾಮರಾಜನಗರ: ಸೆ.22ರಿಂದ ಆರಂಭವಾಗುವ ಜಾತಿಗಣತಿ ಸಮೀಕ್ಷೆ ವೇಳೆ ಬ್ರಾಹ್ಮಣ ಸಮುದಾಯದವರು ಜಾತಿ ಕಾಲಂನಲ್ಲಿ ಉಪ ಪಂಗಡಗಳ ಬದಲಾಗಿ ‘ಬ್ರಾಹ್ಮಣ’ ಎಂದೇ ಬರೆಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣರಲ್ಲಿ ಹಲವು ಉಪಪಂಗಡಗಳಿದ್ದರೂ ಜಾತಿಯ ಹೆಸರು ಬರೆಸುವಾಗ ಬ್ರಾಹ್ಮಣ ಎಂದು ನಮೂದಿಸಬೇಕು, ಹಾಗೆಯೇ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು, ಗೊಂದಲಕ್ಕೆ ಒಳಗಾಗಬಾರದು ಎಂದರು.
ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಮಾತನಾಡಿ, ಬ್ರಾಹ್ಮಣ ಸಮುದಾಯದ ಏಳ್ಗೆಯ ನಿಟ್ಟಿನಲ್ಲಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ನಿಖರ ಮಾಹಿತಿ ನೀಡಬೇಕು, ಜಿಲ್ಲೆಯಲ್ಲಿ 9 ರಿಂದ 10 ಸಾವಿರ ಬ್ರಾಹ್ಮಣರಿದ್ದು 65ಕ್ಕೂ ಹೆಚ್ಚು ಉಪಪಂಗಡಗಳು ಇವೆ. ಸಮೀಕ್ಷೆ ವೇಳೆ ಉಪ ಪಂಗಡಗಳನ್ನು ನಮೂದಿಸದೆ ಬ್ರಾಹ್ಮಣ ಎಂದೇ ಬರೆಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸತೀಶ್ ಕುಮಾರ್, ಪ್ರತಾಪ್, ಲಕ್ಷ್ಮಿ ನರಸಿಂಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.