ADVERTISEMENT

ಚಾಮರಾಜನಗರ ದಸರಾ: ರಂಜಿಸಿದ ಹಾಸ್ಯ ಸಂಜೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 6:14 IST
Last Updated 1 ಅಕ್ಟೋಬರ್ 2025, 6:14 IST
ಚಾಮರಾಜನಗರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ 7ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದರು 
ಚಾಮರಾಜನಗರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ 7ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದರು    

ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ 7ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯನ, ನೃತ್ಯ, ಮಿಮಿಕ್ರಿ, ಹಾಸ್ಯ ಕಾರ್ಯಕ್ರಮ ಗಮನ ಸೆಳೆಯಿತು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಿಮಿಕ್ರಿ ಗೋಪಿ ಅವರು ಗಣ್ಯರು ಹಾಗೂ ನಟರ ಡೈಲಾಗ್‌ ಹೇಳಿ ರಂಜಿಸಿದರು. ಸೋಬಾನೆ ಪದ, ಅವತಾರ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್ ತಂಡದ ನೃತ್ಯ ವೈಭವ ಗಮನ ಸೆಳೆಯಿತು.

ಉಮ್ಮತ್ತೂರು ‌ಬಸವರಾಜು, ಜ್ಯೂನಿಯರ್ ವಿಷ್ಣುವರ್ಧನ್, ಜ್ಯೂನಿಯರ್ ಶಂಕರ್‌ನಾಗ್‌ ತಂಡ ನಡೆಸಿಕೊಟ್ಟ ಹಾಸ್ಯ ಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ನಕ್ಕುನಗಿಸಿತು. ಕನ್ನಡ ಚಳವಳಿಗಾರರು ಸತ್ಯ ಹರಿಶ್ಚಂದ್ರ ಚಿತ್ರದ ಹಾಡಿಗೆ ಕುಣಿದು ಸಂಭ್ರಮಿಸಿದರು.

ADVERTISEMENT

ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಕಲಾವಿದರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಉದ್ಯಮಿ ಶ್ರೀನಿಧಿ ಕುದರ್, ಕನ್ನಡ ಚಳವಳಿಗಾರ ವರದನಾಯಕ, ಗೋವಿಂದರಾಜ ಮುತ್ತಿಗೆ, ಜಗದೀಶ್, ಜಿ.ಬಂಗಾರು, ಪಣ್ಯದಹುಂಡಿ ರಾಜ್, ಚಾ.ವೆಂ.ರಾಜ್ ಗೋಪಾಲ್, ಮಹೇಶ್ ಗೌಡ, ಆಟೋ ಲಿಂಗರಾಜು, ಶಿವಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.