ADVERTISEMENT

ಚಾಮರಾಜನಗರ ಜಿಲ್ಲಾ ಅಕ್ಷರ ಜಾತ್ರೆಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಕಸಾಪ ಲೋಗೊ
ಕಸಾಪ ಲೋಗೊ   

ಚಾಮರಾಜನಗರ: ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹನೂರು ಸಜ್ಜಾಗಿದ್ದು, ಗೌರಿಶಂಕರ ಕಲ್ಯಾಣ ಮಂಟಪದ ಆವರಣದಲ್ಲಿ ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಗಳ ಆರೋಹಣದೊಂದಿಗೆ ಎರಡು ದಿನಗಳ ಕನ್ನಡ ಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಬೆಳಿಗ್ಗೆ 9 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷ ಚಾಮಶೆಟ್ಟಿ ಸಿ. ಅವರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ.10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಸಮ್ಮೇಳನದಲ್ಲಿ ಇಂದು

ADVERTISEMENT

ಗೋಷ್ಠಿ–1: ಸಮಯ ಮಧ್ಯಾಹ್ನ 2

ಅಧ್ಯಕ್ಷತೆ:ಕರಾಮುವಿ ಸಹ ಪ್ರಾಧ್ಯಾಪಕ ಡಾ.ಪಿ. ಮಣಿ

ಆಶಯ ನುಡಿ:ಅಧ್ಯಾಪಕ ಗುರುಪ್ರಸಾದ್ ಕೊಡಗಾಪುರ

ವಿಷಯ 1:ಚಾಮರಾಜನಗರ ಜಿಲ್ಲೆಯ ಆಧುನಿಕ ಕನ್ನಡ ಸಾಹಿತ್ಯ: ಸ್ವಾತಂತ್ರ್ಯ ಪೂರ್ವ

ಮಂಡನೆ: ಸಹ ಪ್ರಾಧ್ಯಾಪಕ ಥಿಯೋಡರ್‌ ಲೂಥರ್‌

ವಿಷಯ 2:ಚಾಮರಾಜನಗರ ಜಿಲ್ಲೆಯ ಆಧುನಿಕ ಕನ್ನಡ ಸಾಹಿತ್ಯ: ಸ್ವಾತಂತ್ರ್ಯೋತ್ತರ

ಮಂಡನೆ:ಉಪನ್ಯಾಸಕ ಡಾ.ಪಳನಿಸ್ವಾಮಿ ಮುಡುಗೂರು

ಅತಿಥಿಗಳು: ಹನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಸುಂದರಮೂರ್ತಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್.

ಕವಿಗೋಷ್ಠಿ: ಸಮಯ ಮಧ್ಯಾಹ್ನ 3.30

ಅಧ್ಯಕ್ಷತೆ:ರಂಗಕರ್ಮಿ ಕೃಷ್ಣ ಜನಮನ

ಆಶಯ ನುಡಿ: ಬಾಳಗುಣಸೆ ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.