ಚಾಮರಾಜನಗರ: ಜಿಲ್ಲೆಯಾದ್ಯಂತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದವು.
ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್, ಹೊಂಗನೂರು ಚಂದ್ರು, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಕೆಂಗಾಕಿ, ನಗರಸಭಾ ಸದಸ್ಯೆ ಚಿನ್ನಮ್ಮ, ಕಲಾವತಿ, ಮುಖಡರಾದ ಕಾವೇರಿ ಶಿವಕುಮಾರ್, ನಾಗಶ್ರೀ, ಎಸ್.ರಾಜು, ಪಿ.ಕುಮಾರನಾಯಕ್, ನಾಗವಳ್ಳಿ ನಾಗಯ್ಯ ಸೇರಿದಂತೆ ಹಲವರು ಇದ್ದರು.
ತಾಲ್ಲೂಕಿನ ಹರವೆ ಗ್ರಾಮದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಡಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಅಪ್ರವರಂಭೆ ರಂಗತಂಡದ ಸಂಸ್ಥಾಪಕ ನಾ.ನಾಗಚಂದ್ರ, ಹರವೆ ವಿರಕ್ತ ಮಠಾದೀಶ ಸರ್ಪಭೂಷಣ ಸ್ವಾಮೀಜಿ ಅಂಬೇಡ್ಕರ್, ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೇರಿ ನಡೆಯಿತು. ಚನ್ನಬಸವೇಶ್ವರ ಪ್ರತಿಷ್ಠಾನದ ಕಾರ್ಯದರ್ಶಿ ಎಚ್.ಎಸ್.ಗಿರೀಶ್, ಮಹದೇವಸ್ವಾಮಿ, ಲತಾ, ಮುಖ್ಯ ಶಿಕ್ಷಕ ಲೋಕೇಶ್, ರಾಜು, ಸಹಶಿಕ್ಷಕರು ಹಾಜರಿದ್ದರು.
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮಂಜುನಾಥ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಯಶೋದಮ್ಮ, ಪಿಡಿಒ ಮಹೇಶ್ವರಿ, ಗ್ರಾಮ ಪಂಚಾಯತಿ ಸದಸ್ಯರಾದ ಪುಟ್ಟರಾಜು, ಕೇಶವಮೂರ್ತಿ, ರಮೇಶ್, ಯೋಗ ನರಸಿಂಹಸ್ವಾಮಿ, ಕಲೀಲ್, ಮಂಜುನಾಥ್, ಸಂತೋಷ್, ಮಹದೇವ ನಾಯಕ್, ಮಹೇಶ್, ಕೆಂಪಶೆಟ್ಟಿ, ರಾಮಚಂದ್ರ, ಚಿಕ್ಕಸಿದ್ಧ ಶೆಟ್ಟಿ, ಗ್ರಾಮ ಪಂಚಾಯತಿಯ ಸಿಬ್ಬಂದಿ, ಗ್ರಾಮಸ್ಥರು ಇದ್ದರು.
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಫಾರೆಸ್ಟ್ ಎಸ್‌ಓಎಸ್ ವತಿಯಿಂದ ಸೌಂಡ್ ಬಾತ್ ಧ್ಯಾನ ಕಾರ್ಯಕ್ರಮ ನಡೆಯಿತು. ವೆಲ್‌ನೆಸ್ ತಜ್ಞ ಗಣೇಶ್ ಶ್ರೀನಿವಾಸನ್ ನೇತೃತ್ವದಲ್ಲಿ ಧ್ಯಾನದ ಕ್ರಮ ಹೇಳಿಕೊಡಲಾಯಿತು.
ಚಾಮರಾಜನಗರದ ಕೆಎಸ್ಆರ್‌ಟಿಸಿ ವಿಭಾಗಿಯ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.