ADVERTISEMENT

ಚಾಮರಾಜನಗರ ಜಿಲ್ಲೆಯ ಮೊದಲ ಮಹಿಳಾ ಎಸ್.ಪಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 15:22 IST
Last Updated 14 ಜುಲೈ 2021, 15:22 IST
ದಿವ್ಯಾ ಸಾರಾ ಥಾಮಸ್
ದಿವ್ಯಾ ಸಾರಾ ಥಾಮಸ್   

ಚಾಮರಾಜನಗರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ದಿವ್ಯಾ ಸಾರಾ ಥಾಮಸ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಅವರ ಜಾಗಕ್ಕೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದವರಿಷ್ಠಾಧಿಕಾರಿ (ಎಸ್ ಪಿ) ಜಿ.ಸಂಗೀತಾ ಅವರನ್ನು ನಿಯೋಜಿಸಲಾಗಿದೆ. ಇವರು 2011 ವರ್ಷದ ಬ್ಯಾಚ್ ನ ಐಪಿಎಸ್ ಅಧಿಕಾರಿ.

ವರ್ಗವಾಗಿರುವ ದಿವ್ಯಾ ಸಾರಾ ಥಾಮಸ್ ಅವರಿಗೆ ಸರ್ಕಾರ ಇನ್ನೂ ಹುದ್ದೆ ತೋರಿಸಿಲ್ಲ. ದಿವ್ಯಾ ಅವರು ಚಾಮರಾಜನಗರಜಿಲ್ಲೆಯ‌ ಮೊದಲ ಮಹಿಳಾ ಎಸ್ ಪಿ ಆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.