
ಸಂತೇಮರಹಳ್ಳಿ: ಸಮೀಪದ ಕುದೇರು ಚಾಮುಲ್ ಸಭಾಂಗಣದಲ್ಲಿ ನೂತನವಾಗಿ 100 ಗ್ರಾಂ ಉಲ್ಲಾಸ್‌ಗುಲ್ಲಾ ಪ್ಯಾಕೇಟ್ ಅನ್ನು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಗುರುವಾರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿ, ‘ವರ್ಷದ ಹಿಂದೆ ಚಾಮುಲ್‌ವತಿಯಿಂದ ಉಲ್ಲಾಸ್‌ಗುಲ್ಲಾವನ್ನು ತಯಾರಿಸಲು ಆರಂಭಿಸಿದ್ದು, 200 ಗ್ರಾಂ ಪ್ಯಾಕೆಟ್ ಅನ್ನು ಗ್ರಾಹಕರಿಗೆ ₹100ಕ್ಕೆ ನೀಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ 60ರಿಂದ 70 ಕೆ.ಜಿ ಮಾರಾಟವಾಗುತಿತ್ತು. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉಲ್ಲಾಸ್‌ಗುಲ್ಲಾ ಸಿಹಿ ದೊರಕಬೇಕು ಎನ್ನುವ ಉದ್ದೇಶದಿಂದ ಚಾಮುಲ್ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಗ್ರಾಹಕರಿಗೆ ಹೊಸ ವರ್ಷದ ಅಂಗವಾಗಿ 100 ಗ್ರಾಂ ಪ್ಯಾಕ್‌ಗೆ ₹ 50 ದರ ವಿಧಿಸಲಾಗಿದೆ. 200 ಗ್ರಾಂ ಪ್ಯಾಕೇಟ್‌ಗೆ ರಿಯಾಯಿತಿ ದರದಲ್ಲಿ ₹90ಕ್ಕೆ ನೀಡಲಾಗುತ್ತದೆ’ ಎಂದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಮೊಸರು ಉತ್ಪಾದಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆ ವ್ಯಾಪ್ತಿಯಲ್ಲಿ 50 ಕ್ಷೀರ ಕೇಂದ್ರಗಳನ್ನು ತೆರೆದಿದ್ದು, ಈ ಹಿನ್ನೆಲೆಯಲ್ಲಿ ದಿನಕ್ಕೆ ಹಾಲು, ಮೊಸರು ಮಾರಾಟವಾಗುತ್ತಿದೆ, ಚಾಮುಲ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ವಾರಕೊಮ್ಮೆ ಉತ್ಪಾದಕರ ಖಾತೆಗೆ ನೇರವಾಗಿ ಆನ್‌ಲೈನ್ ಮೂಲಕ ಹಣ ಜಮಾ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಚಾಮುಲ್ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ನಿರ್ದೇಶಕರಾದ ನಂಜುಂಡಪ್ರಸಾದ್, ವೈ.ಸಿ.ನಾಗೇಂದ್ರ, ಎಚ್.ಎಸ್.ಬಸವರಾಜು, ಉದ್ದನೂರು ಪ್ರಸಾದ್, ಸುನೀಲ್, ಸದಾಶಿವಮೂರ್ತಿ, ಸಾಹುಲ್ ಆಹಮ್ಮದ್, ಶೀಲಾ ಪುಟ್ಟರಂಗಶೆಟ್ಟಿ, ಕಮರವಾರವಾಡಿ ರೇವಣ್ಣ, ವ್ಯವಸ್ಥಾಪಕ ನಿರ್ದೇಶಕ ಕೆ.ರಾಜ್‌ಕುಮಾರ್, ಕೆ.ಎಂ.ಎಫ್ ಪ್ರತಿನಿಧಿ ವೆಂಕಟೇಶ್, ಪಶು ಸಂಗೋಪನೆ ಉಪ ನಿರ್ದೇಶಕ ಡಾ.ಮಂಜುನಾಥ್, ಸಹಕಾರ ಉಪನಿರ್ದೇಶಕಿ ಜ್ಯೋತಿರಾಜ್ ಅರಸ್, ಆಡಳಿತ ಉಪ ವ್ಯವಸ್ಥಾಪಕ ಪ್ರಸಾದ್, ಮಾರುಕಟ್ಟೆ ವಿಭಾಗ ವ್ಯವಸ್ಥಾಪಕರ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.