ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಶನಿವಾರ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡರು.
ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಮಾಘ ಪೂರ್ಣಿಮೆ ಅಂಗವಾಗಿ ಬುಧವಾರ ಚಾಮುಂಡೇಶ್ವರಿ ರಥೋತ್ಸವ ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ಜರುಗಿತು.
ಮುಂಜಾನೆ ಚೂತ್ರ ಶುದ್ಧ ಪೂರ್ಣಿಮೆ ಹಸ್ತ ನಕ್ಷತ್ರದಲ್ಲಿ ದೇವಿಗೆ ಬಗೆಬಗೆ ಪುಷ್ಪಗಳ ಅಲಂಕಾರ ಮಾಡಲಾಗಿತ್ತು. ದೇಗುಲದ ಸುತ್ತಲೂ ಬಣ್ಣದ ರಂಗೋಲಿ ಇಟ್ಟು, ಧೂಪ ದೀಪ ಬೆಳಗಿ ಹೂ ಮತ್ತು ತಳಿರು ತೋರಣಗಳನ್ನು ಸಿಂಗರಿಸಿ ಮಂಗಳಾರತಿ ಬೆಳಗಲಾಯಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ಹಣ್ಣು, ಕಾಯಿ ಪೂಜೆ ನೆರವೇರಿಸಿ ಧನ್ಯತೆ ಮೆರೆದರು.
ಗ್ರಾಮಸ್ಥರು ಮತ್ತು ದೇವಾಸ್ಥಾನ ಸಮಿತಿ ಸದಸ್ಯರು, ಅನ್ನಸಂತರ್ಪಣೆಯಲ್ಲಿ ಭಾಗಿಯಾದರು. ಸಾವಿರಾರು ಭಕ್ತರು ಸಂಜೆಯ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ಧರು. ಇದೇ 15 ರಂದು ದೇವಾಲಯದಲ್ಲಿ ವಿಶೇಷ ಉತ್ಸವ ಜರುಗಲಿದೆ ಎಂದು ಅರ್ಚಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.