ADVERTISEMENT

ಚೆಸ್‌: ಚಿನ್ಮಯ್, ಸಿದ್ಧಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 16:28 IST
Last Updated 25 ಸೆಪ್ಟೆಂಬರ್ 2022, 16:28 IST
ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಚಿನ್ಮಯ್‌ ಕೌಶಿಕ್‌, ಸೈಯದ್‌ ಅಬ್ದುಲ್‌ ಖಾದರ್‌, ಸಿದ್ಧಿರಾವ್‌ ಮತ್ತು ರುದ್ರ ರಾಜೀವ್‌
ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಚಿನ್ಮಯ್‌ ಕೌಶಿಕ್‌, ಸೈಯದ್‌ ಅಬ್ದುಲ್‌ ಖಾದರ್‌, ಸಿದ್ಧಿರಾವ್‌ ಮತ್ತು ರುದ್ರ ರಾಜೀವ್‌   

ಚಾಮರಾ‌ಜನಗರ: ಬೆಂಗಳೂರಿನ ಚಿನ್ಮಯ್‌ ಕೌಶಿಕ್‌ ಹಾಗೂ ಸಿದ್ಧಿ ರಾವ್‌ ಇಲ್ಲಿ ನಡೆದ 11 ವರ್ಷದೊಳಗಿನವರ ಮುಕ್ತಚೆಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದರು.

ಮುಕ್ತ ವಿಭಾಗದಲ್ಲಿ ಚಿನ್ಮಯ್ ಅವರು ಎಂಟು ಸುತ್ತುಗಳಿಂದ ಎಂಟು ಪಾಯಿಂಟ್ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಿದ್ಧಿ ರಾವ್ ಏಳು ಅಂಕಗಳನ್ನು ಗಳಿಸಿ ಪ್ರಶಸ್ತಿ ಜಯಿಸಿದರು.

ತಲಾ ಆರೂವರೆ ಪಾಯಿಂಟ್‌ಗಳನ್ನು ಗಳಿಸಿದ ಹೊಸಪೇಟೆಯ ಸೈಯದ್‌ ಅಬ್ದುಲ್‌ ಖಾದರ್‌ (10) ಹಾಗೂ ಬೆಂಗಳೂರಿನ ಪ್ರಥಮೇಶ್‌ ಶಶಿಕಾಂತ ದೇಶಮುಖ್‌ (11) ಮುಕ್ತ ವಿಭಾಗದಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು.

ADVERTISEMENT

ಬಾಲಕಿಯರ ವಿಭಾಗದಲ್ಲಿ 7 ಪಾಯಿಂಟ್‌ಗಳನ್ನು ಕಲೆ ಹಾಕಿದ ಮಂಗಳೂರಿನ ರುದ್ರಾ ರಾಜೀವ್‌ (11) ಎರಡನೇ ಸ್ಥಾನ ಹಾಗೂ 6.5 ಪಾಯಿಂಟ್‌ಗಳನ್ನು ಗಳಿಸಿದ ಬೆಂಗಳೂರಿನ ಶ್ರೇಯಾ ರಾಜೇಶ್‌ ಮೂರನೇ ಸ್ಥಾನ ಗಳಿಸಿದರು.

ರಾಷ್ಟ್ರಮಟ್ಟಕ್ಕೆ ಆಯ್ಕೆ: ಎರಡೂ ವಿಭಾಗಗಳಲ್ಲಿ ಮೊದಲ ‌ಎರಡು ಸ್ಥಾನಗಳನ್ನು ಗಳಿಸಿದ ನಾಲ್ವರು (ಚಿನ್ಮಯ ಕೌಶಿಕ್‌, ಸಿದ್ಧಿರಾವ್‌, ಅಬ್ದುಲ್‌ ಖಾದರ್‌ ಮತ್ತು ರುದ್ರ ರಾಜೀವ್‌) ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.ಹರಿಯಾಣದ ಗುರುಗ್ರಾಮದಲ್ಲಿ ಅ. 28ರಿಂದ ನಡೆಯಲಿರುವ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ನಡೆದ ಟೂರ್ನಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 152 ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.