ADVERTISEMENT

ಜಿಲ್ಲೆಯಾದ್ಯಂತ ತಂಪು ಹವೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 14:30 IST
Last Updated 10 ಜುಲೈ 2019, 14:30 IST
ಜಿಲ್ಲೆಯಾದ್ಯಂತ ಬುಧವಾರ ಮೋಡ ಕವಿದ ವಾತಾವರಣ ಇತ್ತು
ಜಿಲ್ಲೆಯಾದ್ಯಂತ ಬುಧವಾರ ಮೋಡ ಕವಿದ ವಾತಾವರಣ ಇತ್ತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ಮೋಡ ಕವಿದ ವಾತಾವರಣ ಕಂಡು ಬಂತು. ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಎಲ್ಲ ಕಡೆಗಳಲ್ಲೂ ತುಂತುರು ಮಳೆಯಾಗಿದೆ.

ಇಡೀ ದಿನ ವಾತಾವರಣ ತಂಪಾಗಿತ್ತು. ಕೆಲವು ದಿನಗಳಿಂದೀಚೆಗೆ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರು ಬುಧವಾರದ ತಂಪು ಹವೆಯಿಂದ ಕೊಂಚ ನೆಮ್ಮದಿ ಅನುಭವಿಸಿದರು.

ಮಂಗಳವಾರ ಮಧ್ಯಾಹ್ನದ ನಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ರಾತ್ರಿಯೂ ಮಳೆಯಾಗಿದೆ. ಬುಧವಾರ ಬೆಳಿಗ್ಗೆ ಬಿಸಿಲಿನ ವಾತಾವರಣ ಇದ್ದರೂ 11.30ರ ಹೊತ್ತಿಗೆ ಮೋಡ ಕವಿಯಲು ಆರಂಭವಾಯಿತು. 12 ಗಂಟೆ ಸಮಯಕ್ಕೆ ಸಣ್ಣದಾಗಿ ಮಳೆಯೂ ಆಯಿತು. ಆ ಬಳಿಕ ತಣ್ಣನೆ ಗಾಳಿ ಬೀಸಲು ಆರಂಭಿಸಿತು. ಸಂಜೆಯವರೆಗೂ ಅದೇ ಹವೆ ಮುಂದುವರಿದಿತ್ತು. ರಾತ್ರಿಯೂ ಶೀತ ವಾತಾವರಣ ಇತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.