ಹನೂರು: ಪಟ್ಟಣದ ರಾಮಾಪುರ ಮುಖ್ಯ ರಸ್ತೆಯಲ್ಲಿನ ಹೊಸ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ.
ಮುಂಜಾನೆ ವೇಳೆ ನೀರು ಮತ್ತು ಆಹಾರ ಅರಸಿ ಪಟ್ಟಣದತ್ತ ಬಂದಿದ್ದ ಜಿಂಕೆ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿದೆ.
ಬೀದಿ ನಾಯಿಗಳ ದಾಳಿ ಕಂಡು, ಸ್ಥಳೀಯರು ರಕ್ಷಿಸಲು ಹೋದರು ಪ್ರಯೋಜನವಾಗಿಲ್ಲ. ಘಟನೆಯ ಬೆನ್ನಲ್ಲೆ ಸ್ಥಳೀಯರು ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.