ADVERTISEMENT

ಮಹದೇಶ್ವರ ಬೆಟ್ಟ | ದೀಪಾವಳಿ ಮಹೋತ್ಸವ: ವಿಶೇಷ ಪೂಜೆ

ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚನೆ, ವಿವಿಧ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 16:25 IST
Last Updated 22 ಅಕ್ಟೋಬರ್ 2022, 16:25 IST
ಶನಿವಾರ ಸಂಜೆ ಕಂಡು ಬಂದ ದೇವಾಲಯದ ಧೃಶ್ಯ
ಶನಿವಾರ ಸಂಜೆ ಕಂಡು ಬಂದ ದೇವಾಲಯದ ಧೃಶ್ಯ   

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಾರಂಭ ದಿನವಾದ ಶನಿವಾರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆಯಿತು.

ಮಹದೇಶ್ವರ ಬೆಟ್ಟದಲ್ಲಿ ದೀಪಾ ವಳಿ ಜಾತ್ರೆಯು ಶನಿವಾರದಿಂದ ಪ್ರಾರಂಭವಾಗಿದ್ದು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳಾದ ಬಿಲ್ವಾರ್ಚನೆ, ಗಂಧಾಭಿಷೇಕ, ಪುಷ್ಪಾರ್ಚನೆ, ಕ್ಷೀರಾಭಿಷೇಕ, ಮಹಾ ರುದ್ರಾಭಿಷೇಕ ಮಹಾ ಮಂಗಳಾರತಿ ಪೂಜೆಗಳು ನೆರವೇರಿದವು. ಬಳಿಕ ಮಾದಪ್ಪನ ಧರ್ಮದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೀಪಾವಳಿ ಜಾತ್ರೆ ಮೊದಲ ದಿನ ವಿರಳವಾಗಿ ಭಕ್ತರನ್ನು ಕಂಡಿದ್ದು, ಎಣ್ಣೆಮಜ್ಜನ ಹಾಗೂ ಅಮಾವಾಸ್ಯೆ, ಹಾಲರವಿ ಉತ್ಸವ ಮತ್ತು ಮಹಾ ರಥೋತ್ಸವಕ್ಕೆ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆಯಿದೆ.

ADVERTISEMENT

ಜನ ಸಂದಣಿ ವಿರಳವಾಗಿದ್ದರಿಂದ ದೇವಾಲಯಕ್ಕೆ ಬಂದಿದ್ದ ಭಕ್ತರು ಆನಂದದಿಂದ ಮಾದೇಶ್ವರನನು ದರ್ಶನ ಮಾಡಿ, ಹರಕೆ ಕಾಣಿಕೆಯನ್ನು ಸ್ವಾಮಿಯ ಮುಡಿಗೇರಿಸಿ, ಸಂಜೆ ನಡೆದ ಚಿನ್ನದ ತೇರಿನ ಉತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.