ADVERTISEMENT

ಅಂಬೇಡ್ಕರ್ ತತ್ವ ಸಿದ್ಧಾಂತ ಪಾಲಿಸಿ: ನ್ಯಾ. ಶ್ರೀಕಾಂತ್

ಕೊಳ್ಳೇಗಾಲ: ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 14:00 IST
Last Updated 12 ಏಪ್ರಿಲ್ 2025, 14:00 IST
<div class="paragraphs"><p>ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ, ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಇವರ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಮತ್ತು ಮಹಿಳಾ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ವನ್ನು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಟಿ.ಸಿ ಶ್ರೀಕಾಂತ್ ಅವರು ಉದ್ಘಾಟನೆ ಮಾಡಿದರು</p></div>

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ, ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಇವರ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಮತ್ತು ಮಹಿಳಾ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ವನ್ನು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಟಿ.ಸಿ ಶ್ರೀಕಾಂತ್ ಅವರು ಉದ್ಘಾಟನೆ ಮಾಡಿದರು

   

ಕೊಳ್ಳೇಗಾಲ:‘ಡಾ.ಬಿ.ಆರ್.ಅಂಬೇಡ್ಕರ್ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾ ಮತ್ತು  ಸೆಷನ್ಸ್ ನ್ಯಾಯಧೀಶ ಟಿ.ಸಿ ಶ್ರೀಕಾಂತ್ ಹೇಳಿದರು.

ನಗರದಲ್ಲಿ ಶುಕ್ರವಾರ ರಾತ್ರಿ ಕೊಳ್ಳೇಗಾಲ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ಮಹಿಳಾ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

‘ಅಂಬೇಡ್ಕರ್ ಅವರನ್ನು ಜಯಂತಿ ದಿನಕ್ಕೆ ಮಾತ್ರ ನೆನಪಿಸಿಕೊಳ್ಳಬಾರದು. ಅವರ ತತ್ವ ಹಾಗೂ ಆದರ್ಶ ಗಳನ್ನು ಪಾಲನೆ ಮಾಡಬೇಕಿದೆ. ಸಂವಿಧಾನ ಮೂಲಕ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ನಮ್ಮ ರಕ್ಷಣೆಗೆ ಕಾನೂನುಗಳನ್ನು ನೀಡಿದ್ದಾರೆ. ಇವೆಲ್ಲವನ್ನು ನಾವು ಅರಿತುಕೊಳ್ಳಬೇಕಿದೆ. ನಾವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಮರೆತಿದ್ದೇವೆ. ಆದ್ದರಿಂದ ನಾಗರೀಕರಾಗಿ ಪ್ರಾಮಾಣಕವಾಗಿ ಕಾನೂನು ಗೌರವಿಸಬೇಕು. ಸಂವಿಧಾನ ಆಶಯಗಳು ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಧೀಶೆ ಸುನೀತಾ ಮಾತನಾಡಿ, ‘ಹೆಣ್ಣು ಮಕ್ಕಳು ಪ್ರತಿನಿತ್ಯವೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಧ್ಯರಾತ್ರಿ ಸಂದರ್ಭ ಮಹಿಳೆ ನಿರ್ಭಯದಿಂದ ಒಬ್ಬಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾಳೋ ಅಂದು ಸ್ವಾತಂತ್ರ್ಯ ದೊರೆತಂತೆ ಎಂದು ಗಾಂಧೀಜಿ ಹೇಳಿದರು. ಇದೀಗ ಆ ಪರಿಸ್ಥಿತಿ ನಮ್ಮಲ್ಲಿ ಇದೆಯೇ ಎಂದು ಅರಿಯಬೇಕಿದೆ. ಮನೆಯಲ್ಲಿಯೇ ಮನೆಯವರಿಂದಲೇ ಶೋಷಣೆ, ಅತ್ಯಾಚಾರ ನಡೆಯುತ್ತಿದೆ. ಮೊದಲು ನಮ್ಮ ಮನೆಯಿಂದ ಜಾಗೃತಿ ಆಗಬೇಕು’ ಎಂದರು.

ಪ್ರಧಾನ ಸಿವಿಲ್ ನ್ಯಾಯಧೀಶೆ ನಂದಿನಿ ಮಾತನಾಡಿ, ‘ನಾನು ಹತ್ತನೇ ತರಗತಿ ಓದುವಾಗಲೇ ಜಾತೀಯತೆ ಕಂಡಿದ್ದೇನೆ. ಈ ಸಂಗತಿಗಳು ನನಗೆ ಚೆನ್ನಾಗಿ ಓದುವ ಛಲವನ್ನು ತುಂಬಿತು. ನನ್ನ ಪಾಲಕರ ಆಸೆಯಂತೆ ನ್ಯಾಯಧೀಶೆ ಆಗಬೇಕು ಸಂಕಲ್ಪ ಮಾಡಿದೆ. ಅಂಬೇಡ್ಕರ್ ಅವರು ಓದುವ ವೇಳೆ ಬಹಳ ಕಷ್ಟ‌ಪಟ್ಟಿದ್ದಾರೆ. ಇದು ನನಗೆ ‌ಸ್ಫೂರ್ತಿ ಕೊಟ್ಟಿದೆ. ಸ್ವಾಭಿಮಾನ ಬೆಳೆಸಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲ್ಯದಲ್ಲಿ ಅವರಿಗೆ ಸಿಗರೇಟ್, ಮದ್ಯ ಖರೀದಿಸಿ ತರಲು ಹೇಳಬಾರದು. ಅವರ ಮುಂದೆ ಕೆಟ್ಟ ಮಾತುಗಳನ್ನು ಆಡಬಾರದು. ಇವೆಲ್ಲವೂ ಅವರ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಉತ್ತಮ ಶಿಕ್ಷಣ ಕೊಡಿಸಬೇಕು. ನಮಗೆ ಮೀಸಲಾತಿ ಇದೆ. ಆದರೂ ಮಕ್ಕಳು ಮೆರಿಟ್ ನಲ್ಲಿ ಪಾಸ್ ಆಗುವ ರೀತಿ ತಯಾರು ಮಾಡಬೇಕು’ ಎಂದರು.

ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜೀತ್ ಕುಮಾರ್, ವಕೀಲ ಸಂಘದ ಅಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಬಿ.ಆರ್. ಮಹೇಶ್, ಹಿರಿಯ ವಕೀಲ ಮಲ್ಲಿಕಾರ್ಜುನ್, ಎಸ್.ಚಿನ್ನರಾಜು ಹಾಗೂ ಭೀಮನಗರ ಮುಖಂಡರು ಹಾಗೂ ನಿವಾಸಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.