ADVERTISEMENT

ಬಂಪರ್ ಬೆಲೆ, ಹೆಚ್ಚುತ್ತಿದೆ ಖಾದ್ಯ ತೈಲದ ನೆಲೆ: ತಾಳೆ ಬೆಳೆದು ಬಾಳಿದರು!

ತಾಳೆಗೆ ಬಂಪರ್ ಬೆಲೆ; ಹೆಚ್ಚುತ್ತಿದೆ ಖಾದ್ಯ ತೈಲದ ನೆಲೆ

ನಾ.ಮಂಜುನಾಥ ಸ್ವಾಮಿ
Published 11 ಫೆಬ್ರುವರಿ 2022, 19:30 IST
Last Updated 11 ಫೆಬ್ರುವರಿ 2022, 19:30 IST
ಯಳಂದೂರು ತಾಲ್ಲೂಕಿನ ಕಾಡಂಚಿನ ಗ್ರಾಮದ ಜಮೀನೊಂದರಲ್ಲಿ ಬೆಳೆದ ತಾಳೆ ಬೆಳೆ
ಯಳಂದೂರು ತಾಲ್ಲೂಕಿನ ಕಾಡಂಚಿನ ಗ್ರಾಮದ ಜಮೀನೊಂದರಲ್ಲಿ ಬೆಳೆದ ತಾಳೆ ಬೆಳೆ   

ಯಳಂದೂರು:ತಾಲ್ಲೂಕಿನಲ್ಲಿ ತಾಳೆ ಬೆಳೆ ಈ ಬಾರಿ ಉತ್ತಮ ಇಳುವರಿ ನೀಡಿದೆ. ಬೆಲೆ ಮತ್ತು ಬೇಡಿಕೆಏರುಗತಿಯಲ್ಲಿದ್ದು, ಬೆಳೆಗಾರರಿಗೆ ನಿರೀಕ್ಷಿಸಿದ ಆದಾಯ ತಂದಿತ್ತಿದೆ.

ಖಾದ್ಯ ತೈಲದ ಬೆಳೆಯಾದ ತಾಳೆ ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡುತ್ತಿದೆ. ಹಾಗಾಗಿ, ಹೊಸಬೇಸಾಯಗಾರರು ತಾಳೆ ಕೃಷಿಯತ್ತ ಚಿತ್ತ ಹರಿಸಿದ್ದು, ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.

ಅಗರ, ಕಸಬಾ ಹೋಬಳಿಗಳಲ್ಲಿ ತಾಳೆ ಬೆಳೆಯಲು ಬೇಕಾದ ಸೂಕ್ತ ವಾತಾವರಣ ಇದೆ. ಈಚಿನವರ್ಷಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲೂ ರೈತರು ತಾಳೆ ಕೃಷಿ ಮಾಡುತ್ತಿದ್ದಾರೆ. 2021-22ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 25 ಎಕರೆ ಪ್ರದೇಶದಲ್ಲಿ ತಾಳೆ ಕೃಷಿ
ವಿಸ್ತರಿಸಲಿದೆ. ಫಸಲು ಕೈಸೇರುವ ತನಕ ಅಂತರ ಬೆಳೆಗಳಿಗೂ ಅವಕಾಶ ಇದೆ. ಕೇಂದ್ರ–ರಾಜ್ಯ ಸರ್ಕಾರದ ಯೋಜನೆ ನೆರವು ತಾಳೆ ಕ್ಷೇತ್ರದ ವಿಸ್ತರಣೆಗೆ ಸಹಾಯ ಆಗಲಿದೆ.

ADVERTISEMENT

‘2021-22ನೇ ಸಾಲಿನಲ್ಲಿ ತಾಳೆಹಣ್ಣಿಗೆ ಉತ್ತಮ ಧಾರಣೆ ಇದೆ. ಎರಡು ವರ್ಷದ ಹಿಂದೆ ಬೆಲೆ ಕೆ.ಜಿ.ಗೆ ₹ 3 ಇತ್ತು. ಈಗ ಧಾರಣೆ ₹ 15ರಿಂದ ₹ 18ರವರೆಗೆ ಏರಿಕೆ ಆಗಿದೆ. ಇದರಿಂದ ಪ್ರಗತಿಪರ ಕೃಷಿಕರು ತಾಳೆ ಕೃಷಿ ಮಾಡಲು ಸಿದ್ಧತೆ ನಡೆಸಿದ್ದಾರೆ’ ಎಂದು ಸಾಗುವಳಿದಾರ ದುಗ್ಗಹಟ್ಟಿ ರಾಜೇಶ್ ‘ಪ್ರಜಾವಾಣಿ’ಗೆ ಹೇಳಿದರು.

ನಿರ್ವಹಣಾ ವೆಚ್ಚ ಕಡಿಮೆ: ‘ಮಣ್ಣಿನ ಧಾರಣಾ ಸಾಮರ್ಥ್ಯ ಕಡಿಮೆ ಇದ್ದರೂ ತಾಳೆ ಬೆಳೆಯಬಹುದು. ಆದರೆ, ಹೆಚ್ಚು ನೀರು ಬೇಡುತ್ತದೆ. ನಿರ್ವಹಣೆಗೆ ಹೆಚ್ಚು ವೆಚ್ಚ ಮಾಡಬೇಕಿಲ್ಲ. 1 ಎಕರೆಗೆ 15 ಟನ್ ಇಳುವರಿಪಡೆಯಲು ಅವಕಾಶ ಇದೆ. ಎಣ್ಣೆ ಉತ್ಪಾದಕ ಕಂಪನಿಗಳು ತಾಳೆ ಕೊಳ್ಳಲು ಹೆಚ್ಚಿನ ಆಸಕ್ತಿತೋರಿವೆ’ ಎಂದು ಹೊನ್ನೂರು ರೈತ ಅರಸು ತಿಳಿಸಿದರು.

‘ಕಬಿನಿ ತೋಟಗಾರಿಕಾ ಕ್ಷೇತ್ರದಲ್ಲಿ ತಾಳೆ ಎಣ್ಣೆ ಯಂತ್ರ ಅಳವಡಿಸಲಾಗಿದೆ. ಎಣ್ಣೆ ಉತ್ಪಾದಿಸಿಕೊಳ್ಳುವ ಬೆಳೆಗಾರರಿಗೂ ಅವಕಾಶವಿದೆ. ಕಂಪನಿಗಳು ನೇರವಾಗಿ ರೈತರಿಂದ ಕೊಂಡೊಯ್ಯುವ ಏಕ ಗವಾಕ್ಷಿ ಯೋಜನೆಯೂ ಸಾಧ್ಯವಾಗಿದೆ. ಹಾಗಾಗಿ, ತಾಳೆ ಬೆಳೆಯುವತ್ತ
ಚಿಂತನೆ ನಡೆಸಿದ್ದೇವೆ’ ಎನ್ನುತ್ತಾರೆ ಬೇಸಾಯಗಾರರು.

ಬೆಳೆಗೆ ಸರ್ಕಾರದ ಉತ್ತೇಜನ‌

ತಾಲ್ಲೂಕಿನಲ್ಲಿ 50 ಎಕರೆ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ. ಗಿಡವನ್ನು ನಾಟಿ ಮಾಡಿದ ಮೂರು ವರ್ಷಗಳಲ್ಲಿ ಫಸಲು ಶುರುವಾಗುತ್ತದೆ.30 ವರ್ಷಗಳವರೆಗೂ ಇಳುವರಿ ಸಿಗುತ್ತದೆ. ಎಕರೆಗೆ ಸರಾಸರಿ 10 ಟನ್ಇಳುವರಿ ಸಿಗಲಿದೆ. ಮೂರು ಕೆ.ಜಿ. ಹಣ್ಣಿನಿಂದ 1 ಕೆ.ಜಿ.ಎಣ್ಣೆ ಲಭ್ಯವಾಗುತ್ತದೆ. ಎರಡುವರ್ಷಗಳಲ್ಲಿ ಬೆಲೆ ಶೇ 50ರಷ್ಟು ಹೆಚ್ಚಳ ಆಗಿದೆ.

‘ತಾಳೆ ಎಣ್ಣೆಗೆ ಹೆಚ್ಚು ಬೇಡಿಕೆ ಇದೆ. ಮಲೇಷಿಯಾಕ್ಕೆ ಶೇ 90 ಪೂರೈಕೆ ಆಗುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಶೇ 70-80 ಅಡುಗೆಗೆ ಬಳಸಲಾಗುತ್ತದೆ. ಕೇಂದ್ರ ಸರ್ಕಾರತಾಳೆ ಬೆಳೆಗೆ ಉತ್ತೇಜನ ನೀಡಿದೆ. ಕಂಪನಿಗಳು ತಾಳೆ ಸಸಿ ವಿತರಿಸಿ, ಬೇಸಾಯ, ಖರೀದಿಮತ್ತು ಮಾರುಕಟ್ಟೆ ಮಾಹಿತಿ ನೀಡುತ್ತವೆ. ತಾಳೆ ಬೆಳೆಗಾರರಿಗೆ ಕೊಳವೆ ಬಾವಿಗೆ ₹ 50ಸಾವಿರ ನೀಡುತ್ತದೆ. ಗೊಬ್ಬರ, ಅಂತರ ಬೆಳೆಗೆ ಉಚಿತ ನೆರವು ನೀಡುತ್ತಿದೆ. ಆಸಕ್ತರೈತರು ಮುಂದೆ ಬಂದು, ನೆರವು ಪಡೆಯಬಹುದು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.