ಕೊಳ್ಳೇಗಾಲ: ನಗರದಲ್ಲಿ ರಂಜಾನ್ ಮಾಸದ ಕೊನೆಯ ದಿನ ಈದ್ ಉಲ್ ಫಿತ್ರ್ ಅನ್ನು ಸಡಗರದಿಂದ ಆಚರಿಸಲಾಯಿತು.
ಈದ್ ಪ್ರಯುಕ್ತ ಸೋಮವಾರ ನಗರದ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ಅಲ್ಲಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಹಜರತ್ ಅಬ್ದುಲ್ ತವಾಬ್ ಅವರು ಸಾಮೂಹಿಕ ನಮಾಜ್ ಪಠಿಸಿದರು. ಧರ್ಮ ಗುರು ಶೊಯೇಬ್ ಅಲಿ ಅವರು ಧರ್ಮ ಪ್ರವಚನ ಬೋಧಿಸಿದರು. ನಂತರ ಸಮೀಪದಲ್ಲಿರುವ ಸಮಾಧಿಗಳಿಗೆ ತೆರಳಿದ ಮುಸ್ಲಿಮರು ತಮ್ಮ ಪೂರ್ವಜರ ಮುಕ್ತಿಗಾಗಿ ಪ್ರಾರ್ಥಿಸಿದರು.
‘ದೇಶಕ್ಕಾಗಿ ಹಾಗೂ ಈ ಬಾರಿ ಉತ್ತಮ ಮಳೆ, ಬೆಳೆಗಾಗಿ ಬಡವರಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇವೆ’ ಎಂದು ಯುವ ಮುಖಂಡ ಮೊಹಮ್ಮದ್ ಜುಹೇಬ್ ತಿಳಿಸಿದರು.
ಪ್ರಾರ್ಥನೆ ಮುಗಿದ ನಂತರ ವಾಪಸ್ ಖುದ್ದೂಸಿಯ ಮಸೀದಿಗೆ ತೆರಳಿದರು. ಈ ಸಂದರ್ಭದಲ್ಲಿ ವಿವಿಧ ಧರ್ಮಗಳ ಮುಖಂಡರು ಆಗಮಿಸಿ ಮುಸ್ಲಿಮರಿಗೆ ಈದ್-ಉಲ್-ಫಿತ್ರ್ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಾಂತರಾಜು, ನಾಶೀರ್ ಷರೀಫ್, ನಾಮನಿರ್ದೇಶಿತ ಸದಸ್ಯ ದೇವಾನಂದ, ಪುಟ್ಟ ಅರಸಶೆಟ್ಟಿ, ಜಗದೀಶ್, ಈಶ್ವರ್, ಜೊಸೇಫ್ ಫರ್ನಾಂಡಿಸ್, ಚಿಕ್ಕಮಾದು, ಸನಾವುಲ್ಲಾ, ರಫೀಕ್ ಅಹಮದ್, ಅಕ್ಮಲ್, ಫಾಯಿಕ್ ಅಹಮ್ಮದ್, ಎಜಾಜ್ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.