ADVERTISEMENT

ಗುಂಡ್ಲುಪೇಟೆ | ಕಾಡಾನೆ ಹಿಂಡು ದಾಳಿ: ಟೊಮೆಟೊ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:27 IST
Last Updated 11 ಜನವರಿ 2026, 4:27 IST
ಗುಂಡ್ಲುಪೇಟೆ ತಾಲ್ಲೂಕಿನ ದೇಶಿಪುರ ಗ್ರಾಮದ ಅಭಿ ಎಂಬುವರ ಜಮೀನಿನಲ್ಲಿ ಟೊಮೆಟೊ ಫಸಲನ್ನು ಕಾಡಾನೆ ತುಳಿದು ನಾಶಪಡಿಸಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ದೇಶಿಪುರ ಗ್ರಾಮದ ಅಭಿ ಎಂಬುವರ ಜಮೀನಿನಲ್ಲಿ ಟೊಮೆಟೊ ಫಸಲನ್ನು ಕಾಡಾನೆ ತುಳಿದು ನಾಶಪಡಿಸಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ದೇಶಿಪುರ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಟೊಮೆಟೊ ಫಸಲನ್ನು ತಿಂದು, ತುಳಿದು ನಾಶಪಡಿಸಿದೆ.

ಗ್ರಾಮದ ಅಭಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಟೊಮೆಟೊ ಫಸಲಿನ ಮೇಲೆ ಬುಧವಾರ ತಡರಾತ್ರಿ ದಾಳಿ ಮಾಡಿವೆ.

‘ಕಾಡಾನೆ ಹಿಂಡು ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ತುಳಿದು, ತಿಂದು ನಾಶ ಪಡಿಸಿವೆ. ಇಪ್ಪತ್ತು ದಿನದ ಬಳಿಕ ಕೊಯ್ಲಿಗೆ ಬರುತ್ತಿದ್ದ ಫಸಲು ನಾಶ ಆಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ರೈತ ಅಭಿ ಅಳಲು ತೋಡಿಕೊಂಡರು. 

ADVERTISEMENT

ಪರಿಹಾರಕ್ಕೆ ಒತ್ತಾಯ: ಓಂಕಾರ ವಲಯ ವ್ಯಾಪ್ತಿಯಲ್ಲಿ ಆಗಾಗ್ಗೆ ಕಾಡಾನೆಗಳು ಲಗ್ಗೆಯಿಟ್ಟು ರೈತರ ಫಸಲುಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಇದರಿಂದ ರೈತರು ರೋಸಿ ಹೋಗಿದ್ದು, ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ವಹಿಸುತ್ತಿಲ್ಲ. ಆದ್ದರಿಂದ ಕಾಡಾನೆಗಳು ಅರಣ್ಯದಿಂದ ಹೊರ ಬರಂತೆ ಕ್ರಮ ಕೈಗೊಳ್ಳುವ ಜೊತೆಗೆ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.