ಹನೂರು ತಾಲೂಕಿನ ಮಂಚಾಪುರ ಗ್ರಾಮದ ಜಮೀನಿನಲ್ಲಿ ಕಾವಲು ಕಾಯುವಾಗ ಆನೆ ದಾಳಿಗೆ ತುತ್ತಾಗಿ ಗಾಯಗೊಂಡ ರೈತ ವೆಂಕಟಶೆಟ್ಟಿ ಬೇಟಿ ಮಾಡಿ ಮಾಹಿತಿ ಪಡೆದುಕೊಂಡರು.( ಮಧ್ಯೆದಲ್ಲಿರುವವರು ಗಾಯಗೊಂಡವರು)
ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ ಮಾಡಿದ್ದು ಈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂದಚಾಪುರ ಗ್ರಾಮದ ವೆಂಕಟಶೆಟ್ಟಿ ಎಂಬ ರೈತ ಶುಕ್ರವಾರ ಜಮೀನಿನಲ್ಲಿ ಕಾವಲಿಗೆ ತೆರಳಿ ರಾತ್ರಿ ಮಲಗಿದ್ದಾರೆ. ಮಧ್ಯೆ ರಾತ್ರಿ 1ರ ಸುಮಾರಿಗೆ ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ರೈತನ ಮೇಲೆ ದಾಳಿ ಮಾಡಿ ಎತ್ತಿ ಬಿಸಾಡಿದೆ. ಬಿಸಾಡಿದ ರಭಸಕ್ಕೆ ಬೆನ್ನು ಮೂಳೆ ನೋವಾಗಿದೆ. ಸಾವರಿಸಿಕೊಂಡು ದಾಳಿಯಿಂದ ತಪ್ಪಿಸಿಕೊಂಡು ಪಾರಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಅರಣ್ಯದ ಸುತ್ತಲೂ ಹಾಕಿರುವ ಸೋಲಾರ್ ಬೇಲಿ ಹಾಗೂ ಆನೆ ಕಂದಕ ಸರಿಯಾಗಿಲ್ಲದ ಪರಿಣಾಮ ರಾತ್ರಿ ಕಾಡು ಪ್ರಾಣಿಗಳು ನೀರು ಮೇವಿಗಾಗಿ ಗ್ರಾಮಗಳಿಗೆ ನುಗ್ಗುತ್ತಿವೆ. ಗ್ರಾಮಗಳಿಗೆ ಬರುವ ಸಂದರ್ಭ ಜಮೀನಿನಲ್ಲಿ ಕಾವಲು ಕಾಯತುವವರ ಮೇಲೆ ದಾಳಿ ಮಾಡುತ್ತಿರುವುದರಿಂದ ಕಾಡಂಚಿನ ಗ್ರಾಮಗಳ ಜನರು ಭಯಬೀತರಾಗಿದ್ದು ಕೂಡಲೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಕಾಡುವ ಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಎಂದು ಅರಣ್ಯದಂಚಿನ ಗ್ರಾಮಗಳ ಜನರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.