ADVERTISEMENT

ಹನೂರು: ವಿದ್ಯುತ್‌ ತಂತಿ ತುಳಿದು ಆನೆ ಸಾವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 6:33 IST
Last Updated 3 ಮಾರ್ಚ್ 2020, 6:33 IST
ಆನೆಯ ಮೃತದೇಹ
ಆನೆಯ ಮೃತದೇಹ   

ಹನೂರು: ಮಲೆಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ಗಡಿಯಂಚಿನ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು 25 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ.

ತಾಲ್ಲೂಕಿನ ಗುಳ್ಯ ಗ್ರಾಮದ ಚಿಕ್ಕಮಲ್ಲಯ್ಯ ಅವರು ಜಮೀನಿನಲ್ಲಿ ಬೆಳೆದಿದ್ದ ಜೋಳದ ಫಸಲಿನ ರಕ್ಷಣೆಗಾಗಿ ಜಮೀನಿನ ಸುತ್ತಲು ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಸೋಮವಾರ ರಾತ್ರಿ ಜಮೀನಿಗೆ ಬಂದ ಒಂಟಿ ಕಾಡಾನೆ ವಿದ್ಯುತ್ ಸಂಪರ್ಕದಿಂದ ಮೃತಪಟ್ಟಿದೆ.

ಸೋಮವಾರ ರಾತ್ರಿ ಸುಮಾರು 10ಗಂಟೆ ಘಟನೆ ಸಂಭವಿಸಿರಬಹುದು. ಆನೆ ಸತ್ತಿರುವ ವಿಷಯವನ್ನು ಗುಟ್ಟಾಗಿಡುವ ಸಲುವಾಗಿ ಆನೆ ಮೃತ ದೇಹದ ಮೇಲೆ ಜೋಳದ ಕಡ್ಡಿ ಮುಚ್ಚಿಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆನೆ ಸತ್ತಿರುವ ವಿಚಾರ ಗೊತ್ತಾಗಿದೆ. ಆನೆಯ ಸೊಂಡಿಲು ಹಾಗೂ ಮುಂದಿನ ಕಾಲುಗಳಲ್ಲಿ ತಂತಿ ಸುತ್ತಿಕೊಂಡಿದ್ದು ವಿದ್ಯುತ್ ಸಂಪರ್ಕದಿಂದಲೇ ಆನೆ ಮೃತಪಟ್ಟಿದೆ ಎಂಬುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.