ADVERTISEMENT

ಚಾಮರಾಜನಗರ | ₹ 22.55 ಲಕ್ಷ ಮೌಲ್ಯದ ಮದ್ಯ ನಾಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:30 IST
Last Updated 11 ಜನವರಿ 2026, 4:30 IST
ವಾಯಿದೆ ಮೀರಿದ ಮತ್ತು ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಈಚೆಗೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಕಚೇರಿಯಲ್ಲಿ ನಾಶಪಡಿಸಲಾಯಿತು
ವಾಯಿದೆ ಮೀರಿದ ಮತ್ತು ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಈಚೆಗೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಕಚೇರಿಯಲ್ಲಿ ನಾಶಪಡಿಸಲಾಯಿತು   

ಚಾಮರಾಜನಗರ: ವಾಯಿದೆ ಮೀರಿದ ಮತ್ತು ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಈಚೆಗೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಕಚೇರಿಯಲ್ಲಿ ನಾಶಪಡಿಸಲಾಯಿತು.

ವಿವಿಧ ಕಂಪನಿಗಳ ವೈನ್ ಮತ್ತು ಬಿಯರ್ ಸೇರಿದಂತೆ 10,372 ಲೀಟರ್ ₹ 22.55 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಉಪ ಅಧೀಕ್ಷಕ ವಿಜಯ ಕುಮಾರ್ ನೇತೃತ್ವದಲ್ಲಿ ನಾಶಪಡಿಸಲಾಯಿತು.

ಅಬಕಾರಿ ಇನ್‌ಸ್ಪೆಕ್ಟರ್ ಕೆ.ತನ್ವಿರ್, ಪಾನಿಯ ನಿಗಮದ ವ್ಯವಸ್ಥಾಪಕ ಪ್ರಸಾದ್, ಸಹಾಯಕ ವ್ಯವಸ್ಥಾಪಕ ಸಿದ್ದರಾಜು, ಬದನಗುಪ್ಪೆ ವೃತ್ತದ ಗ್ರಾಮ ಆಡಳಿತ ಅಧಿಕಾರಿ ರಮೇಶ್, ರಾಜೇಂದ್ರ ಪ್ರಸಾದ್, ನಿಗಮ ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.