ADVERTISEMENT

ಮಲೆಮಹದೇಶ್ವರ ವನ್ಯಧಾಮದಲ್ಲಿ‌ ಜಿಂಕೆ ಬೇಟೆ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 12:34 IST
Last Updated 3 ಜುಲೈ 2022, 12:34 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಐವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಜಿಂಕೆ ಮಾಂಸ, ನಾಡ ಬಂದೂಕು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿರುವುದು
ಮಲೆಮಹದೇಶ್ವರ ವನ್ಯಧಾಮದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಐವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಜಿಂಕೆ ಮಾಂಸ, ನಾಡ ಬಂದೂಕು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿರುವುದು   

ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ‌ ಜಿಂಕೆಯನ್ನು ಬೇಟೆಯಾಡಿದ್ದ ಐವರನ್ನು ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಕಾಂಚಳ್ಳಿ ಗ್ರಾಮದ ಜಡೇಸ್ವಾಮಿ, ಅಜ್ಜೀಪುರ ಗ್ರಾಮದ ಕೃಷ್ಣೇಗೌಡ, ಕೆ.ಗುಂಡಾಪುರ ಗ್ರಾಮದ ಕದರಯ್ಯ, ಸನಾವುಲ್ಲಾ ಹಾಗೂ ತೌಸೀಫ್ ಬಂಧಿತ ಆರೋಪಿಗಳು. ದಾಳಿ ಸಂದರ್ಭದಲ್ಲಿ ಗುಳ್ಯ ಗ್ರಾಮದ ನಾರಾಯಣ ತಲೆಮರೆಸಿಕೊಂಡಿದ್ದಾರೆ.

ಬೇಟೆಯಾಡಿದ ಜಿಂಕೆಯ ಮಾಂಸವನ್ನು ಹನೂರು ಬಫರ್ ವಲಯ ವ್ಯಾಪ್ತಿಯ ಪಚ್ಚೆದೊಡ್ಡಿ ಗಸ್ತಿನ ಕದರಯ್ಯ ಅವರ ಮನೆಯಲ್ಲಿ ಅಡಗಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಲಯ ಅರಣ್ಯಾಧಿಕಾರಿ ಸಯ್ಯಾದ್ ಸಬಾ ನದಾಫ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ADVERTISEMENT

ಐದು ಜನರನ್ನು ವಶಕ್ಕೆ ವಿಚಾರಣೆಗೊಳಪಡಿಸಿದಾಗ ನಾಡಬಂದೂಕಿನಿಂದ ಬೇಟೆಯಾಡಿ ಮಾಂಸವನ್ನು ಪಾಲು‌ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಜಿಂಕೆ ಮಾಂಸ, ನಾಡ ಬಂದೂಕು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡು ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸಾಲಾನ್, ಕೆ. ಪ್ರಸಾದ್, ಅರಣ್ಯ ರಕ್ಷಕರಾದ ಪರಶುರಾಮ್, ನಂದೀಶ್, ಅರಣ್ಯ ವೀಕ್ಷಕರಾದ, ಜೆ.ಶಿವರಾಜು, ಕೃಷ್ಣ, ಗಣೇಶ, ಪಚ್ಚೆಗೌಡ, ವಾಹನ ಚಾಲಕರಾದ ಮುಕುಂದವರ್ಮ ಹಾಗೂ ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.