ADVERTISEMENT

ಹನೂರು | ವಡ್ಡರ ದೊಡ್ಡಿ ಶಾಲೆಯಲ್ಲಿ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:33 IST
Last Updated 27 ಫೆಬ್ರುವರಿ 2026, 8:33 IST
ಹನೂರು ಶೈಕ್ಷಣಿಕ ವಲಯದ ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಹಾರ ಮೇಳ ಹಮ್ಮಿಕೊಳ್ಳಲಾಗಿತ್ತು.
ಹನೂರು ಶೈಕ್ಷಣಿಕ ವಲಯದ ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಹಾರ ಮೇಳ ಹಮ್ಮಿಕೊಳ್ಳಲಾಗಿತ್ತು.   

ಹನೂರು: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಎಂದು ರಾಮಾಪುರ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಮಹದೇವ್ ಪ್ರಸಾದ್ ತಿಳಿಸಿದರು.

ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ  ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಹಾಗಾಗಿ ಶಿಕ್ಷಕರು ಕ್ರಿಯಾಶೀಲತೆಗೆ ಬಳಸಿಕೊಂಡು ಆಹಾರ ಮೇಳ, ವಿಜ್ಞಾನ ಮೇಳ ಆಯೋಜಸಿ, ಸಮುದಾಯದವರನ್ನು ಶಾಲೆಯತ್ತ ಕರೆತರ ಬಹುದಾಗಿದೆ.  ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.

ADVERTISEMENT

 ಮುಖ್ಯ ಶಿಕ್ಷಕ ಮಹಾದೇವ ಮಾತನಾಡಿ, ಮಕ್ಕಳಿಗೆ ಆಹಾರ ತಿನಿಸುಗಳ ಮಹತ್,  ವ್ಯಾವಹಾರಿಕ ಜ್ಞಾನ ಮೂಡಿಸಲು, ಗ್ರಾಹಕರನ್ನು ಸೆಳೆಯುವ ಕೌಶಲ ವೃದ್ಧಿಸಲು ಅಹಾರ ಮೇಳವನ್ನು ಆಯೋಜಿಸಲಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ  ಎಂದರು.

ಇಕೋ ಕ್ಲಬ್ ಅಡಿ ಆಹಾರ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ವಿದ್ಯಾರ್ಥಿಗಳು ಕಲ್ಲಂಗಡಿ, ಪರಂಗಿ ಹಣ್ಣು, ಸಮೋಸ, ವಿವಿಧ ಹಣ್ಣುಗಳ ಜ್ಯೂಸ್, ಕೇಕ್‌, ಪಾನಿಪುರಿ,ಮಜ್ಜಿಗೆ,  ತಿನಿಸು– ಪಾಲೀಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು.

 ಸಹ ಶಿಕ್ಷಕರಾದ ಬಾಲು ನಾಯ್ಕ, ಸುರಭಿ, ಅತಿಥಿ ಶಿಕ್ಷಕಿ ಯಶೋದ, ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್ ಮತ್ತು ಕಾಂತರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.