ADVERTISEMENT

ಚಾಮರಾಜನಗರ| ವೃತ್ತಿ ಒತ್ತಡಕ್ಕೆ ವಿರಾಮ: ಅರಣ್ಯ ಇಲಾಖೆ ಅಧಿಕಾರಿಗಳ ಕ್ರೀಡಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:13 IST
Last Updated 4 ಸೆಪ್ಟೆಂಬರ್ 2025, 2:13 IST
ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಅರಣ್ಯ ಇಲಾಖೆ ಕ್ರೀಡಾಕೂಟವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು
ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಅರಣ್ಯ ಇಲಾಖೆ ಕ್ರೀಡಾಕೂಟವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು   

ಚಾಮರಾಜನಗರ: ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆ ಮಾಡುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.

ಸದಾ ಕಾರ್ಯದೊತ್ತಡದಲ್ಲಿ ಮುಳುಗಿರುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಕಾಲ ಒತ್ತಡ ಮರೆತು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕೊಳ್ಳೇಗಾಲದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ, ಯಳಂದೂರು ತಾಲ್ಲೂಕಿನ ಬಿಆರ್‌ಟಿ ಅರಣ್ಯ, ಚಾಮರಾಜನಗರದ ಸಾಮಾಜಿಕ ಅರಣ್ಯ ವಿಭಾಗ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದುಗೂಡಲು ಹಾಗೂ ಕ್ರೀಡಾ ಪ್ರತಿಭೆ ಅನಾವರಣಗೊಳಿಸಲು ಕ್ರೀಡಾಕೂಟ ವೇದಿಕೆಯಾಯಿತು. ಎರಡು ದಿನಗಳ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ADVERTISEMENT

ಫಲಿತಾಂಶ:

ಕೇರಂ ಪುರುಷರ ವಿಭಾಗ; ಡಿವೈಆರ್‌ಎಫ್ಒ ಎಂ.ಬಿ.ಶ್ರೀಕಾಂತ್ ಪ್ರಥಮ, ಮಹದೇವ್‌ ದ್ವಿತೀಯ, ಬಿ.ರಾಚಯ್ಯ ತೃತೀಯ, ಕೇರಂ ಮಹಿಳೆಯರ ವಿಭಾಗ ಡಬಲ್ಸ್: ರತ್ನ ಬಿ.ಆರ್‌., ಸುಮಾ ಪ್ರಥಮ, ಬಸಮ್ಮ, ಲಲಿತಾ ದ್ವಿತೀಯ, ಡಿಸ್ಕಸ್ ಥ್ರೋ: ರಾಜು ಪ್ರಥಮ, ಶೇಖರಯ್ಯ ದ್ವಿತೀಯ, ಬರ್ಕತ್ ಅಲಿ ತೃತೀಯ, 45 ವರ್ಷ ಮೇಲ್ಪಟ್ಟವರ ಡಿಸ್ಕಸ್ ಥ್ರೋ: ಅನಂತರಾಮು ಬಿ, ಪ್ರಥಮ, ಶ್ರೀನಿ ದ್ವಿತೀಯ, ರಾಜೇಂದ್ರ ಸ್ವಾಮಿ ತೃತೀಯ.

ಜಾವಲಿನ್ ಥ್ರೋ ಮಹಿಳೆಯರ ವಿಭಾಗ: ಶ್ವೇತಾ ಪ್ರಥಮ, ಅರುಣಾಶ್ರೀ ಹೊಸಮನಿ ದ್ವಿತೀಯ, ಬಸಮ್ಮ ತೃತೀಯ, ಪುರುಷರ ವಿಭಾಗ: ಬರ್ಕತ್ ಅಲಿ ಪ್ರಥಮ, ಚಂದ್ರಶೇಖರ್ ಕಂಬಾರ್ ದ್ವಿತೀಯ, ರಮೇಶ್‌ ಮಕರಾದ್ ತೃತೀಯ, 45 ವರ್ಷ ಮೇಲ್ಪಟ್ಟವರು: ಅನಂತರಾಮು ಬಿ, ಪ್ರಥಮ, ಶ್ರೀನಿ ದ್ವಿತೀಯ, ಮಲ್ಲಿಕಾರ್ಜುನ ತೃತೀಯ.

ಕೇರಂ ಮಹಿಳೆಯರು: ಎಸ್‌.ಪವಿತ್ರಾ, ಸಿ.ಇ.ಮಹಾಲಕ್ಷ್ಮೀ ದ್ವಿತೀಯ, ಭಾನುಮತಿ ತೃತೀಯ, ರ‍್ಯಾಪಿಡ್ ಚೆಸ್‌: ಎಸ್‌.ಪವಿತ್ರಾ ಪ್ರಥಮ, ಭಾನುಮತಿ ದ್ವಿತೀಯ, 800 ಮೀ ನಡಿಗೆ: ಸುಮಾ ಪ್ರಥಮ, ಶ್ವೇತಾ ದ್ವಿತೀಯ, ರಂಗಮ್ಮ ತೃತೀಯ, 40 ವರ್ಷ ಮೇಲ್ಪಟ್ಟವರ ವಿಭಾಗ: ರಂಗಮಣಿ ಪ್ರಥಮ, ಡಿಸ್ಕಸ್ ಥ್ರೋ: ಶ್ವೇತಾ ಪ್ರಥಮ, ರತ್ನಾ ದ್ವಿತೀಯ, ಅರುಣಶ್ರೀ ಹೊಸಮತಿ ತೃತೀಯ, 40 ವರ್ಷ ಮೇಲ್ಪಟ್ಟವರ ವಿಭಾಗ: ರಂಗಮಣಿ ಪ್ರಥಮ.

ಉದ್ದ ಜಿಗಿತ: ಮಹೇಶ್‌ ಪ್ರಥಮ, ವೀರೇಶ್ ದ್ವಿತೀಯ, ಭೀಮಪ್ಪ ತೃತೀಯ, 45 ವರ್ಷ ಮೇಲ್ಪಟ್ಟವರು: ಮಲ್ಲಿಕಾರ್ಜುನ್‌ ಪ್ರಥಮ, ದೇವರಾಜು ದ್ವಿತೀಯ, ನಂಜುಡಯ್ಯ ತೃತೀಯ, ಮಹಿಳೆಯರ ವಿಭಾಗ: ಸುಮಾ ಪ್ರಥಮ, ಕೇತಮ್ಮ ದ್ವಿತೀಯ, ಬಸಮ್ಮ ತೃತೀಯ, ಶಾಟ್‌ಪಟ್‌: ಶ್ವೇತಾ ಪ್ರಥಮ, ಅರುಣಾಶ್ರೀ ಹೊಸಮತಿ ದ್ವಿತೀಯ, ಬಸಮ್ಮ ತೃತೀಯ, ಶಾಟ್‌ಪಟ್‌: ರಾಜು ಪ್ರಥಮ, ಮಹೇಶ್‌ ದ್ವಿತೀಯ, ಅನಿಲ್ ಕುಮಾರ್ ತೃತೀಯ, 45 ವರ್ಷ ಮೇಲ್ಪಟ್ಟವರು: ಅನಂತರಾಮು, ಶ್ರೀನಿ, ದೇವರಾಜು, 53 ವರ್ಷ ಮೇಲ್ಪಟ್ಟವರು: ಸದಾಶಿವಂ ಪ್ರಥಮ, ಆನಂದ್ ಅರುಣ್ ರಾಜ್ ದ್ವಿತೀಯ, ರೇಣುಕಪ್ಪ ತೃತೀಯ.

800 ಮೀ ನಡಿಗೆ: ರಮೇಶ್‌ ಪ್ರಥಮ, ನಾಗೇಂದ್ರ ಎಂ.ಎನ್‌, ದ್ವಿತೀಯ, ಸದಾಶಿವಪ್ಪ ತೃತೀಯ, 53 ವರ್ಷ ಮೇಲ್ಪಟ್ಟವರು ರೇಣುಕಪ್ಪ ಪ್ರಥಮ, ಆನಂದ್ ಅರುಳ್‌ರಾಜ್ ದ್ವಿತೀಯ, 800 ಮೀ ಓಟ: ಶಿವಕುಮಾರ್ ಪ್ರಥಮ, ಬಾಹುಬಲಿ ದ್ವಿತೀಯ, ರಾಘವೇಂದ್ರ ಎಸ್, ತೃತೀಯ, 45 ವರ್ಷ ಮೇಲ್ಪಟ್ಟವರು: ಮಲ್ಲಿಕಾರ್ಜುನ ಪ್ರಥಮ, ಕುಮಾರ್ ದ್ವಿತೀಯ, 800 ಮೀ ಓಟ: ಕೇತಮ್ಮ ಪ್ರಥಮ, ಬಸಮ್ಮ ದ್ವಿತೀಯ, ಶ್ವೇತಾ ತೃತೀಯ. 100 ಮೀ ಓಟ: ಬಸಮ್ಮ ಪ್ರಥಮ, ಅರುಣಾಶ್ರೀ ದ್ವಿತೀಯ, ಮೇಘನಾ ತೃತೀಯ.

ಅರಣ್ಯ ಇಲಾಖೆ ಕ್ರೀಡಾಕೂಟದಲ್ಲಿ 100 ಮೀ ಓಟ ಸ್ಪರ್ಧೆಯಲ್ಲಿ ಕ್ರಮವಾಗಿ ವಿಜೇತರಾದ ಭಾಸ್ಕರ್ ಹೀರಾಲಾಲ್‌ ಹಾಗೂ ರೇಣುಕಪ್ಪ

1500 ಮೀ ಓಟ: ಸಣ್ಣಪ್ಪ ಗೊರವ ಪ್ರಥಮ, ಪ್ರವೀಣ್ ದ್ವಿತೀಯ, ಸುಭಾಶ್ ಬೋಸ್ಲೆ ತೃತೀಯ, 45 ವರ್ಷ ಮೇಲ್ಪಟ್ಟವರು: ಮಲ್ಲಿಕಾರ್ಜುನ ಪ್ರಥಮ, ದೇವರಾಜು ದ್ವಿತೀಯ, ನಂಜುಂಡಯ್ಯ ತೃತೀಯ, 400 ಮೀ ಓಟ: ಬಸಮ್ಮ ಪ್ರಥಮ, ಅರುಣಾಶ್ರೀ ದ್ವಿತೀಯ, ತಂಗಮಣಿ ತೃತೀಯ, 400 ಮೀಟ ಓಟ: ಸಣ್ಣಪ್ರಕಾಶ್ ಪ್ರಥಮ, ಲಿಂಗರಾಜು ದ್ವಿತೀಯ, ಮಲ್ಲಿಕಾರ್ಜುನ ತೃತೀಯ, 45 ವರ್ಷ ಮೇಲ್ಪಟ್ಟವರು: ದೇವರಾಜು ಪ್ರಥಮ, ಮಲ್ಲಿಕಾರ್ಜುನ ದ್ವಿತೀಯ, ದೀಪಕ್‌ ಮಹಾಲಿಂಗಂ ತೃತೀಯ, 53 ವರ್ಷ ಮೇಲ್ಪಟ್ಟವರು: ರೇಣುಕಪ್ಪ ಪ್ರಥಮ, ಆನಂದ್ ಅರುಳ್‌ರಾಜ್ ದ್ವಿತೀಯ.

100 ಮೀ ಓಟ: ಭಾಸ್ಕರ್ ಪ್ರಥಮ, ಹೀರಾಲಾಲ್ ದ್ವಿತೀಯ, ರೇಣುಕಪ್ಪ ಕೆ.ಪಿ, ತೃತೀಯ, 53 ವರ್ಷ ಮೇಲ್ಪಟ್ಟವರು: ಬಾಸ್ಕರ್ ಪ್ರಥಮ, ರೇಣುಕಪ್ಪ ದ್ವಿತೀಯ, ಸದಾಶಿವಂ ತೃತೀಯ, ವಾಲಿಬಾಲ್: ಕಾವೇರಿ ವನ್ಯಜೀವಿ ವಿಭಾಗ ಪ್ರಥಮ, ಎಂಎಂ ಹಿಲ್ಸ್‌ ದ್ವಿತೀಯ, ಬಿಆರ್‌ಟಿ ತೃತೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.