ADVERTISEMENT

ನಿಂದನೆ, ಹತ್ಯೆಗೆ ಯತ್ನ ಆರೋಪ: ಅರಣ್ಯ ಇಲಾಖೆ 15 ನೌಕರರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 19:27 IST
Last Updated 14 ಸೆಪ್ಟೆಂಬರ್ 2025, 19:27 IST
   

ಚಾಮರಾಜನಗರ: ‘ಹುಲಿ ಸೆರೆ ಹಿಡಿಯಲು ಒತ್ತಾಯಿಸಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಹತ್ಯೆಗೆ ಯತ್ನಿಸಿದ್ದಾರೆ’ ಎಂದು ಬೊಮ್ಮಲಾಪುರದ ಕಮಲಮ್ಮ ದೂರು ನೀಡಿದ್ದು, 15 ನೌಕರರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಎಫ್‌ ಸುರೇಶ್‌, ಡಿಆರ್‌ಎಫ್‌ಒಗಳಾದ ಶಿವಕುಮಾರ್, ಜ್ಞಾನಶೇಖರ್, ಕಾರ್ತಿಕ್ ಯಾದವ್‌, ಸಿಬ್ಬಂದಿ ಶಿವಣ್ಣ, ಸುಚಿತ್ರಾ, ಸುಬ್ರಹ್ಮಣ್ಯ, ನಾಗೇಶ, ಸೋಮು, ಪ್ರವೀಣ, ಮಣಿಕಂಠ, ವಿನಯ್ ಕುಮಾರ್, ಸಂತೋಷ, ರಾಜಪ್ಪ, ಬಸವೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

‘ಹುಲಿ ಸೆರೆ ಹಿಡಿಯಲು ವಿಫಲರಾಗಿದ್ದಾರೆ’ ಎಂದು ಸಿಟ್ಟಿಗೆದ್ದ ಬೊಮ್ಮಲಾಪುರ ಗ್ರಾಮದ ರೈತರು ಈಚೆಗೆ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ್ದರು. ಈ ಸಂಬಂಧ ಬೊಮ್ಮಲಾಪುರ ಹಲವರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.