ADVERTISEMENT

ಯಳಂದೂರು: ಅಂತರ ಮರೆತು ಬಸ್ ಏರಲು ಮುಗಿಬಿದ್ದರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:10 IST
Last Updated 1 ನವೆಂಬರ್ 2020, 4:10 IST
ಯಳಂದೂರು ಬಸ್ ನಿಲ್ದಾಣದಲ್ಲಿ ಶನಿವಾರ ಬಸ್ ಏರಲು ಮುಂದಾದ ಪ್ರಯಾಣಿಕರು
ಯಳಂದೂರು ಬಸ್ ನಿಲ್ದಾಣದಲ್ಲಿ ಶನಿವಾರ ಬಸ್ ಏರಲು ಮುಂದಾದ ಪ್ರಯಾಣಿಕರು   

ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟ ಮತ್ತು ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬಸ್ ಏರುವಾಗ ಇರಬೇಕಾದ ಅಂತರ ಮತ್ತು ಮಾಸ್ಕ್ ಕಂಡು ಬರಲಿಲ್ಲ. ಹೀಗಾಗಿ ಮಕ್ಕಳು ಮತ್ತು ಮಹಿಳೆಯರು ಬಸ್‌ನಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಯಿತು.

ವಾರಾಂತ್ಯದ ರಜೆ ಇದ್ದದ್ದರಿಂದ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಸ್ ಏರುವಾಗ ಸ್ಯಾನಿಟೈಸರ್ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ. ಸಾಲಾಗಿ ನಿಲ್ಲದೆ, ಏಕಕಾಲದಲ್ಲಿ ಮುಗಿ ಬೀಳುತ್ತಾರೆ. ಇದರಿಂದ ಕೋವಿಡ್–19 ಹರಡುವ ಭೀತಿ ಹಲವರನ್ನು ಕಾಡಲಿದೆ.

‘ಶನಿವಾರ ಮತ್ತು ಭಾನುವಾರ ಜನ ಸಂಚಾರದಲ್ಲಿ ಏರಿಕೆ ಕಂಡುಬಂದಿದೆ. ಆಸನದಲ್ಲಿ ಒಟ್ಟಾಗಿಯೇ ಕುಳಿತು ಪ್ರಯಾಣಿಸುತ್ತಾರೆ. ಹಾಗಾಗಿ, ನಿರ್ವಾಹಕರು ಆಸನ ವ್ಯವಸ್ಥೆ ಇರುವಷ್ಟು ಪ್ರಯಾಣಿಕರಿಗೆ ಟಿಕೆಟ್ ನೀಡಿ, ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಬೇಕು’ ಎಂದು ಪಟ್ಟಣದ ಮಂಜುನಾಥ್ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.