ಚಾಮರಾಜನಗರ: ಜಮೀನಿನಲ್ಲಿ ರಾಗಿಯ ಜೊತೆ ಗಾಂಜಾ ಗಿಡವನ್ನು ಬೆಳೆದಿದ್ದ ತಾಲ್ಲೂಕಿನಪುಣಜನೂರು ಸಮೀಪದ ಶ್ರೀನಿವಾಸಪುರ ಕಾಲೊನಿಯ ಜಡೇಗೌಡ ಎಂಬಾತನನ್ನು ಪೊಲೀಸರು ಶುಕ್ರವಾರಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಂದ್ರ, ರಾಮಸಮುದ್ರ ಠಾಣೆಯ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಜಡೇಗೌಡನ ಜಮೀನಿನ ಮೇಲೆ ದಾಳಿ ನಡೆಸಿದಾಗ, ರಾಗಿ ಜೊತೆ ಗಾಂಜಾ ಗಿಡಗಳು ಇದ್ದುದು ಪತ್ತೆಯಾಯಿತು.
ಜಡೇಗೌಡನನ್ನು ಬಂಧಿಸಿರುವ ಪೊಲೀಸರು, 60 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.