ADVERTISEMENT

ಗೋವಾ ಲಾಟರಿ ಟಿಕೆಟ್ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:11 IST
Last Updated 1 ನವೆಂಬರ್ 2020, 4:11 IST

ಮಹದೇಶ್ವರ ಬೆಟ್ಟ: ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ತಂಬಡಿಗೇರಿ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೀರನಹೊಲದ ನಿವಾಸಿ ಶೇಷಣ್ಣಯ್ಯ ಹಾಗೂ ಹುಚ್ಚಯ್ಯ ಬಂಧಿತರು. ಇವರಿಬ್ಬರೂ ತಂಬಡಿಗೇರಿಯ ಮಾರಮ್ಮನ ದೇವಾಲಯದ ಬಳಿ ಗೋವಾ ರಾಜ್ಯದ 6 ಮಾದರಿ ಲಾಟರಿಯನ್ನು ₹ 40 ರಿಂದ ₹ 70ಕ್ಕೆ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಕಾನ್‌ಸ್ಟೆಬಲ್ ವಿಶ್ವರಾಜ್ ಮತ್ತು ಪ್ರಭು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 48 ಲಾಟರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT