ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಭ ಶುಕ್ರವಾರ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 6:57 IST
Last Updated 16 ಏಪ್ರಿಲ್ 2022, 6:57 IST
ಚಾಮರಾಜನಗರದ ಸಂತ ಪೌಲರ ಚರ್ಚ್‌ನಲ್ಲಿ ಗುರುವಾರ ಶುಭ ಶುಕ್ರವಾರದ ಅಂಗವಾಗಿ ಏಸುಕ್ರಿಸ್ತನನ್ನು ಶಿಲುಬೆ ಏರಿಸಿದ ದಿನದ ಘಟನಾವಳಿಗಳನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಯಿತು
ಚಾಮರಾಜನಗರದ ಸಂತ ಪೌಲರ ಚರ್ಚ್‌ನಲ್ಲಿ ಗುರುವಾರ ಶುಭ ಶುಕ್ರವಾರದ ಅಂಗವಾಗಿ ಏಸುಕ್ರಿಸ್ತನನ್ನು ಶಿಲುಬೆ ಏರಿಸಿದ ದಿನದ ಘಟನಾವಳಿಗಳನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ಕ್ರಿಶ್ಚಿಯನ್‌ ಸಮುದಾಯದವರು ಎಲ್ಲ ಚರ್ಚ್‍ಗಳಲ್ಲಿ ಶುಭ ಶುಕ್ರವಾರ (ಗುಡ್ ಪ್ರೈಡೆ) ಆಚರಿಸಿದರು.

ಏಸುಕ್ರಿಸ್ತ ಶಿಲುಬೆಗೆ ಏರಿದ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ. ಕ್ರಿಶ್ಚಿಯನ್ನರು ಉಪವಾಸ ಇದ್ದು, ದಾನ ಧರ್ಮ ಮಾಡಿ ಶೋಕಾಚರಣೆ ಮಾಡುತ್ತಾರೆ.

ಚಾಮರಾಜನಗರ, ಕೊಳ್ಳೇಗಾಲ, ಹನೂರು ಸೇರಿದಂತೆ ಎಲ್ಲ ತಾಲ್ಲೂಕುಗಳ ಚರ್ಚ್‌ಗಳಲ್ಲಿಗುರುವಾರ ರಾತ್ರಿಯಿಂದಲೇ ಧಾರ್ಮಿಕ ವಿಧಿವಿಧಾನಗಳು ನಡೆದವು. ಶುಕ್ರವಾರ ಬೆಳಿಗ್ಗೆ ವಿಶೇಷ ಆರಾಧನೆ, ಪ್ರಾರ್ಥನೆಗಳು ನಡೆದವು. ಕ್ರಿಶ್ಚಿಯನ್ನರು ಕುಟುಂಬ ಸಮೇತರಾಗಿ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ವಿಶೇಷ ಗೀತೆಗಳನ್ನು ಹಾಡಿದರು.

ADVERTISEMENT

ಕೊಳ್ಳೇಗಾಲ ವರದಿ:ನಗರದ ಎಸ್.ಡಿ.ಎ ಚರ್ಚ್, ಅರುಣೋದಯ ಚರ್ಚ್, ಸಂತ ಪ್ರಾಸ್ಸಿಸ್ ಅಸ್ಸಿಸ್ ಚರ್ಚ್, ಬೇತಲ್ ಲೂಥರನ್ ಚರ್ಚ್, ಬ್ರದರನ್ ಚರ್ಚ್, ಕಲ್ವಾರಿ ಚರ್ಚ್, ಸಿ.ಎಸ್.ಐ ಚರ್ಚ್ ಸೇರಿದಂತೆ ಎಲ್ಲಾ ಚರ್ಚ್‍ಗಳಲ್ಲಿಯೂ ವಿಶೇಷ ಆರಾಧನೆ ನಡೆಯಿತು.

ಮಹಾ ಗುರುವಾರ:ಯೇಸುಸ್ವಾಮಿ ತಮ್ಮ ಶಿಷ್ಯರ ಕಾಲು ತೊಳೆದು ಗುರುವಾರ ರಾತ್ರಿ ಅಂದರೆ ಶುಕ್ರವಾರ ಶಿಲುಬೆಗೆ ಏರುವ ಹಿಂದಿನ ದಿನ ಕೊನೆಯ ರಾತ್ರಿ ಭೋಜನ ಪಡೆಯುತ್ತಾರೆ. ಇದರ ಭಾಗವಾಗಿ ಕಾರಣ ಗುರುವಾರ ರಾತ್ರಿ ಎಲ್ಲ ಚರ್ಚ್‌ಗಳಲ್ಲಿ ರಾತ್ರಿ ಭೋಜನ (ಪರಮ ಪ್ರಸಾದ) ನಡೆಯಿತು.

ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಎಲ್ಲ ಚರ್ಚ್‍ಗಳಲ್ಲಿ ವಿಶೇಷವಾದ ಪ್ರಾರ್ಥನೆ ನಡೆಸಿ ನೆ ನಡೆಸಿ ಏಸು ಕ್ರಿಸ್ತ ಶಿಲುಭೆಗೆ ಏರುವ ಹೇಳುವ ಏಳು ನುಡಿಗಳನ್ನು ಪಠಿಸಲಾಯಿತು. ನಂತರಎಲ್ಲರಿಗೂ ಗಂಜಿ, ಚಟ್ನಿ ಹಾಗೂ ಹಣ್ಣಿನ ರಸ ವಿತರಿಸಲು.

ಮೂರು ದಿನಗಳ ನಂತರ, ಈಸ್ಟರ್‌ ಸಂಡೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಶಿಲುಬೆಗೆ ಏರಿದ ನಂತರ ಮೂರು ದಿನಗಳ ನಂತರ ಏಸುಕ್ರಿಸ್ತ ಅವರು ಪುನರುತ್ಥಾನ ಹೊಂದಿದ ಅಂಗವಾಗಿ ಈ ಹಬ್ಬ ಆಚರಿಸಲಾಗುತ್ತದೆ.

ಶಿಲುಬೆಗೇರಿದ ಏಸು: ಚಾಮರಾಜನಗರದ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಗುಡ್‌ ಫ್ರೈಡೆ ಅಂಗವಾಗಿ ಏಸುವನ್ನು ಶಿಲುಬೆಗೆ ಏರಿಸುವ ದೃಶ್ಯವನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಯಿತು.

ಏಸುಕ್ರಿಸ್ತನನ್ನು ಆತನ ಶಿಷ್ಯ ಜುದಾಸ್‌ ವಿರೋಧಿಗಳಿಗೆ ಒಪ್ಪಿಸಿ ಕೊಟ್ಟ ಕ್ಷಣದಿಂದ ಆತನನ್ನು ಪಿಲಾತನ ಮುಂದೆ ಕಟಕಟೆಯಲ್ಲಿ ನಿಲ್ಲಿಸಿ, ಮರಣದಂಡನೆ ವಿಧಿಸಿ ಅವಮಾನಿಸಲಾಗುತ್ತದೆ. ತಲೆಗೆ ಮುಳ್ಳಿನ ಕಿರೀಟ ತೊಡಿಸಿ, ಶಿಲುಬೆಗೆ ಏರಿಸುವವರೆಗಿನ ಚಿತ್ರಣವನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಈ ದೃಶ್ಯಗಳನ್ನು ಕಂಡು ಜನರು ಭಾವುಕರಾದರು. ಚರ್ಚ್‌ ಪಾದ್ರಿ ಸಿ.ಆಂತೋಣಪ್ಪ ಅವರು ಘಟನಾವಳಿಗಳನ್ನು ಮನಮುಟ್ಟುವಂತೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.