ADVERTISEMENT

ಮುಳ್ಳೂರು ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ದೊರೆರಾಜು ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:25 IST
Last Updated 26 ಜೂನ್ 2025, 15:25 IST
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಎಂ.ದೊರೆರಾಜು ಅವಿರೋಧವಾಗಿ ಗುರುವಾರು ಆಯ್ಕೆಯಾದರು
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಎಂ.ದೊರೆರಾಜು ಅವಿರೋಧವಾಗಿ ಗುರುವಾರು ಆಯ್ಕೆಯಾದರು   

ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಎಂ.ದೊರೆರಾಜು ಅವರು ಅವಿರೋಧವಾಗಿ ಗುರುವಾರು ಆಯ್ಕೆಗೊಂಡರು.

ದೊರೆರಾಜು ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನಾಗೇಂದ್ರ ಘೋಷಣೆ ಮಾಡಿದರು.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಎನ್.ಮಹೇಶ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. 15 ಸದಸ್ಯರ ಪೈಕಿ 10 ಸದಸ್ಯರು ಚುನಾವಣೆ ವೇಳೆ ಹಾಜರಿದ್ದರು.

ADVERTISEMENT

ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲ, ಸದಸ್ಯ ಸಿದ್ದಶೆಟ್ಟಿ, ಎಚ್.ನಂಜುಂಡಸ್ವಾಮಿ, ಮಹದೇವಮ್ಮ, ಎನ್.ಮಹೇಶ್, ಚಂದ್ರ ಬಾಬ, ರುಕ್ಕುರಮ್ಯ, ಮಹದೇವಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.