ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸಿ: ಸಿ.ಎಸ್.ನಿರಂಜನಕುಮಾರ್

ಹರ್ ಘರ್ ತಿರಂಗಾ ಯಾತ್ರೆ ಬೈಕ್ ರ‍್ಯಾಲಿಯಲ್ಲಿ ಸಿ.ಎಸ್.ನಿರಂಜನಕುಮಾರ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:50 IST
Last Updated 15 ಆಗಸ್ಟ್ 2025, 6:50 IST
ಗುಂಡ್ಲುಪೇಟೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹರ್ ಘರ್ ತಿರಂಗಾ ಯಾತ್ರೆ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು
ಗುಂಡ್ಲುಪೇಟೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹರ್ ಘರ್ ತಿರಂಗಾ ಯಾತ್ರೆ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು   

ಗುಂಡ್ಲುಪೇಟೆ: ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಹರ್ ಘರ್ ತಿರಂಗಾ ಯಾತ್ರೆ ಬೈಕ್ ರ‍್ಯಾಲಿ ನಡೆಯಿತು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಬೈಕ್ ಚಲಾಯಿಸುವ ಮೂಲಕ ತಿರಂಗಾ ಯಾತ್ರೆ ರ‍್ಯಾಲಿಗೆ ಚಾಲನೆ ನೀಡಿದರು.

ರ‍್ಯಾಲಿಯು ಹೆದ್ದಾರಿ ಮೂಲಕ ಸಾಗಿ ಐ.ಬಿ ಸರ್ಕಲ್, ಚಾಮರಾಜನಗರ ರಸ್ತೆ, ಕೋಡಹಳ್ಳಿ ವೃತ್ತ, ಕೆ.ಆರ್.ಸಿ ರಸ್ತೆ, ಮದಕರಿನಾಯಕರ ಬೀದಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವೀರಯೋಧ ಶಿವನಂದಾ ಸ್ಮಾರಕದ ಬಳಿ ಜಮಾವಣೆಗೊಂಡಿತ್ತು. ಈ ವೇಳೆ ಘೋಷಣೆ ಕೂಗಿದರು.

ADVERTISEMENT

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಸ್ಮರಣೆ ಹಾಗೂ ಸ್ವಾತಂತ್ರ್ಯ ಮೆಲುಕು ಹಾಕುವ ಉದ್ದೇಶದಿಂದ ಹರ್ ಘರ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೇವಲ ಶಾಲಾ-ಕಾಲೇಜು ಸರ್ಕಾರಿ ಕಚೇರಿಗಳಲ್ಲಿ ಧ್ವಜ ಹಾರಾಟ ಮಾಡಲಾಗುತಿತ್ತು. ಪ್ರತಿಯೊಬ್ಬರೂ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಹತ್ತು ವರ್ಷಗಳ ಹಿಂದೆ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸುತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗರಿಮೆ ಹೆಚ್ಚಿದ್ದು, ದೇಶದ ಚಿತ್ರಣವೇ ಬದಲಾಗಿದೆ. ಬೇರೆ ದೇಶದಲ್ಲಿ ಯುದ್ಧ ನಡೆಯುವ ಸಂದರ್ಭ ಭಾರತದ ನೆರವು ಕೋರುತ್ತಿದ್ದಾರೆ. ಪ್ರಸ್ತುತ ಭಾರತ ಬಡತನ ರೇಖೆದಾಟಿ ಮುಂದಿದೆ. ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ಮನೆ ನಿರ್ಮಾಣ ಮಾಡಿ ಸ್ವಚ್ಛ ಭಾರತ್ ಯೋಜನೆ ಜಾರಿಗೊಳಿಸಲಾಗಿದೆ. ಜೆಜೆಎಂ ಮೂಲಕ ಪ್ರತಿ ಮನೆಗೂ ಕುಡಿಯುವ ನೀರು, ಉಚಿತ ಗ್ಯಾಸ್, ಪಡಿತರ ಸೇರಿದಂತೆ ರಾಮ ಮಂದಿರ ನಿರ್ಮಾಣ, 370 ವಿಧಿ ರದ್ದು, ತ್ರಿವಳಿ ತಲಾಖ್ ರದ್ದು, ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಸೇರಿದಂತೆ ಹಲವು ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ಲಾಘಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಪುರಸಭೆ ಸದಸ್ಯ ನಾಗೇಶ್, ಎಸ್ಪಿ ಮೋರ್ಚಾ ಅಧ್ಯಕ್ಷ ನಾಗುಸ್ವಾಮಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ಮಂಜು, ಯುವ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್, ಕನ್ನೇಗಾಲ ಸ್ವಾಮಿ, ಎಲ್.ಸುರೇಶ್, ಅಂಕಹಳ್ಳಿ ರಾಜಶೇಖರಪ್ಪ, ಹನುಮಾನ್ ಶೆಟ್ಟಿ, ಶಿವಾನಂದಸ್ವಾಮಿ, ಪ್ರಣಯ್, ನಮೋ ಮಂಜು, ಅಂಕಹಳ್ಳಿ ಮಹೇಂದ್ರ, ಬಲಚವಾಡಿ ಸುಬ್ಬು, ತೆರಕಣಾಂಬಿಹುಂಡಿ ಗುರುಪ್ರಸಾದ್, ನವೀನ್ ಮೌರ್ಯ, ಅಗತಗೌಡನಹಲ್ಳಿ ಬಸವರಾಜು, ಶಿಂಡನಪುರ ಮಂಜು, ಮಳವಳ್ಳಿ ಮಹೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.