ಸಂತೇಮರಹಳ್ಳಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಶುಕ್ರವಾರ ಶಾಂತಿ ಸಭೆ ನಡೆಯಿತು.
ಸಬ್ ಇನ್ಸ್‌ಪೆಕ್ಟರ್ ತಾಜುದ್ಧೀನ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಹಿಂದೂ ಹಾಗೂ ಮುಸ್ಲಿಂಮರ ಧಾರ್ಮಿಕ ಹಬ್ಬಗಳು ಬರಲಿದ್ದು, ಎಲ್ಲರೂ ಶಾಂತಿ ಸೌಹಾರ್ಧಯುತವಾಗಿ ವರ್ತಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನ್ಯೋನ್ಯತೆಯಿಂದ ಹಬ್ಬ ಆಚರಿಸಿಕೊಳ್ಳಬೇಕು. ಗೌರಿ-ಗಣೇಶ ಹಬ್ಬದ ಅಂಗವಾಗಿ ಗ್ರಾಮಪಂಚಾಯಿತಿ, ಅಗ್ನಿಶಾಮಕ ಠಾಣೆ, ವಿದ್ಯುತ್ ಇಲಾಖೆ ಹಾಗೂ ಧ್ವನಿವರ್ಧಕ ಅಳವಡಿಸಲು ತಹಶೀಲ್ದಾರ್ ಅನುಮತಿ ಪಡೆದು ಪೊಲೀಸರು ಆಗಾಗ ನೀಡುವ ಸಲಹೆ ಸೂಚನೆ ಪಾಲಿಸಬೇಕು. ಅನುಮತಿ ನೀಡಲಾಗುವ ಸಮಯದಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಯಾವುದೇ ಸಂದರ್ಭ ಡಿಜೆಗಳನ್ನು ಬಳಸಬಾರದು’ ಎಂದು ತಿಳಿಸಿದರು.
ತನಿಖಾ ವಿಭಾಗದ ಪಿಎಸ್‌ಐ ಚಂದ್ರಶೇಖರ್, ಎಎಸ್‌ಐಗಳಾದ ನಾಗರಾಜು, ಗಿರೀಶ್, ಸಿಬ್ಬಂದಿ ಸುಂದ್ರಪ್ಪ, ರಮೇಶ್, ಉಮೇಶ್, ಶಿವಕುಮಾರ್, ಗ್ರಾಮಪಂಚಾಯಿತಿ ಸದಸ್ಯರಾದ ಎಂ.ಪಿ.ಶಂಕರ್, ಶಿವಕುಮಾರ್, ಮುಖಂಡರಾದ ಎಚ್.ಸಿ.ಮಹೇಶ್ ಕುಮಾರ್, ಕೆ.ಎಂ.ನಾಗರಾಜು, ಕಮರವಾಡಿ ರೇವಣ್ಣ, ಪುರುಷೋತ್ತಮ್, ಮಾದೇಶ್, ಜಬೀವುಲ್ಲಾ, ಮುನಾವರ್ ಪಾಷಾ, ನಾಗೇಂದ್ರ, ಕುಮಾರ್, ಪುನೀತ್, ಮಂಗಲ ರಮೇಶ್, ಗೂಳಿಪುರ ಜಡೇಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.