ADVERTISEMENT

ಮಹದೇಶ್ವರ ಬೆಟ್ಟ: 34 ದಿನಗಳಲ್ಲಿ ₹2.57 ಕೋಟಿ ಕಾಣಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 12:36 IST
Last Updated 14 ಮೇ 2022, 12:36 IST
ಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು
ಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು   

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ 34 ದಿನಗಳ ಅವಧಿಯಲ್ಲಿ ₹2.57 ಕೋಟಿಯಷ್ಟು ನಗದು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

ಶುಕ್ರವಾರ ತಡರಾತ್ರಿವರೆಗೂ ಹುಂಡಿಗಳ ಹಣ ಎಣಿಕೆ ಕಾರ್ಯ ನಡೆದಿದ್ದು, ನೋಟುಗಳ ರೂಪದಲ್ಲಿ ₹2,39,43,786 ಮೊತ್ತ ಸಂಗ್ರಹವಾದರೆ, ₹17,82,073 ಮೊತ್ತದ ನಾಣ್ಯಗಳನ್ನು ಭಕ್ತರು ಕಾಣಿಕೆ ಹಾಕಿದ್ದಾರೆ.

₹2,57,25,859 ನಗದು ಮಾತ್ರವಲ್ಲದೆ,127 ಗ್ರಾಂಗಳಷ್ಟು ಚಿನ್ನ ಹಾಗೂ 3.447 ಕೆಜಿ ಬೆಳ್ಳಿ ಕೂಡ ಕಾಣಿಕೆ ರೂಪದಲ್ಲಿ ಹುಂಡಿಗಳಲ್ಲಿ ಸಿಕ್ಕಿದೆ.

ADVERTISEMENT

ಈ ಮೊದಲು, ಏಪ್ರಿಲ್‌ ತಿಂಗಳ 8ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.