ADVERTISEMENT

ಪರವಾನಗಿ ಇಲ್ಲದೆ, ಖನಿಜ, ನಿರ್ಮಾಣ ಸಾಮಗ್ರಿ ಸಾಗಣೆ: 11 ಟಿಪ್ಪರ್ ಲಾರಿಗಳು ವಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:39 IST
Last Updated 3 ಆಗಸ್ಟ್ 2025, 2:39 IST
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ತೆರಕಣಾಂಬಿ ಠಾಣೆ ಪೊಲೀಸರು ವಶಪಡಿಸಿಕೊಂಡ ಟಿಪ್ಪರ್‌ಗಳು.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ತೆರಕಣಾಂಬಿ ಠಾಣೆ ಪೊಲೀಸರು ವಶಪಡಿಸಿಕೊಂಡ ಟಿಪ್ಪರ್‌ಗಳು.   

ಗುಂಡ್ಲುಪೇಟೆ: ನೆರೆಯ ಕೇರಳ ರಾಜ್ಯಕ್ಕೆ ಪರವಾನಗಿ ಇಲ್ಲದೆ ಹಾಗೂ ಅಧಿಕ ಭಾರ ಹೊತ್ತು ಖನಿಜ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 11 ಟಿಪ್ಪರ್ ಲಾರಿಗಳು ತೆರಕಣಾಂಬಿ ಠಾಣೆ ಪಿಎಸ್‍ಐ ಕೆ.ಎಂ.ಮಹೇಶ್ ನೇತೃತ್ವದ ತಂಡ ಶನಿವಾರ  ನಸುಕಿನ ವೇಲೆ ವಶಕ್ಕೆ ಪಡೆದಿದ್ದಾರೆ.

ಕೇರಳ ರಾಜ್ಯಕ್ಕೆ ಎಂ.ಸ್ಯಾಂಡ್, ಕಪ್ಪು ಶಿಲೆ, ಬಿಳಿಕಲ್ಲು, ಬೋಡ್ರಸ್ ಸೇರಿದಂತೆ ವಿವಿಧ ಖನಿಜ ಸಾಮಗ್ರಿಗಳನ್ನು ಪರವಾನಗಿ ಇಲ್ಲದೆ , ಟಿಪ್ಪರ್ ಮೂಲಕ ಅಧಿಕ ಭಾರ  ಸಾಗಣೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆದಿದೆ.

ಜಿಲ್ಲಾ  ಎಸ್‌ಪಿ ಬಿ.ಟಿ.ಕವಿತಾ ಆದೇಶದ ಮೇರೆಗೆ  ತೆರಕಣಾಂಬಿ ಪೊಲೀಸರು 11 ಟಿಪ್ಪರ್‌ಗಳನ್ನು ಕೇರಳ ರಸ್ತೆಯ ಕನ್ನೇಗಾಲ ಟೋಲ್ ಬಳಿ ತಡೆದು ತಪಾಸಣೆಗೆ ಒಳಪಡಿಸಿದಾಗ ವಾಹನ ಪರವಾನಗಿ ಇಲ್ಲದ 5 ಹಾಗೂ 6 ಟಿಪ್ಪರ್‌ಗಳಲ್ಲಿ  ನಿಗದಿಗಿಂತ ಅಧಿಕ ಭಾರದ ಸಾಮಗ್ರಿ ಹೇರಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ,  ಟಿಪ್ಪರ್‌ಗಳನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆ ವಶದಲ್ಲಿ ಇರಿಸಲಾಗಿದೆ ಎಂದು ತೆರಕಣಾಂಬಿ ಠಾಣೆ ಪಿಎಸ್‍ಐ ಕೆ.ಎಂ.ಮಹೇಶ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.