ADVERTISEMENT

ವಿದ್ಯುತ್ ತಂತಿ ಬಿದ್ದು ಗಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:39 IST
Last Updated 12 ಮೇ 2025, 16:39 IST
ಗಾಯಾಳು ಸಿದ್ದನಾಯಕ
ಗಾಯಾಳು ಸಿದ್ದನಾಯಕ   

ಗುಂಡ್ಲುಪೇಟೆ: ವಿದ್ಯುತ್ ತಂತಿ ಬಿದ್ದು ಅರಣ್ಯ ಇಲಾಖೆಯ ವಾಚರ್ ತಾಲ್ಲೂಕಿನ ಚಿಕ್ಕತುಪ್ಪೂರು ಗ್ರಾಮದ ಸಿದ್ದನಾಯಕ ಎಂಬುವರು ಗಾಯಗೊಂಡಿರುವ ಘಟನೆ ಪಡಗೂರು-ಕಬ್ಬಹಳ್ಳಿಗೆ ತೆರಳುವ ರಸ್ತೆಯಲ್ಲಿ ಸೋಮವಾರ ನಡೆದಿದೆ. ಕತ್ತು ಹಾಗೂ ಎದೆ ಭಾಗಕ್ಕೆ ತೀವ್ರತರವಾದ ಗಾಯವಾಗಿದೆ.

ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪಡಗೂರು ಗ್ರಾಮದಲ್ಲಿ ಹುಲಿ ಸೆರೆಗೆ ಇರಿಸಿದ್ದ ಬೋನ್‌ನಲ್ಲಿ ಕಟ್ಟಿ ಹಾಕಿದ್ದ ಕರುವಿಗೆ ನೀರು, ಮೇವು ಹಾಕಿ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದರು. ಮಾರ್ಗ ಮಧ್ಯೆದ ಜಮೀನಿನಲ್ಲಿ ಮರ ಕತ್ತರಿಸುವ ವೇಳೆ ಮರದ ಕೊಂಬೆ ವಿದ್ಯುತ್ ತಂತಿಗೆ ತಗುಲಿ ವೈರ್ ತುಂಡಾಗಿ ರಸ್ತೆಯಲ್ಲಿ ತೆರಳುತ್ತಿದ್ದ ವಾಚರ್ ಮೇಲೆ ಬಿದ್ದಿದೆ. ಘಟನೆ ವೇಳೆ ಕರೆಂಟ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಕೂಡಲೇ ಜಮೀನು ಮಾಲೀಕರು ಹಾಗೂ ಪೊಲೀಸರು ಗಾಯಾಳುವನ್ನು ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಕತ್ತಿನ ಭಾಗಕ್ಕೆ ಹೊಲಿಗೆ ಹಾಕಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.