ADVERTISEMENT

ಜೆಎಸ್‌ಎಸ್ ಶಾಲೆ: ಶಾಲಾ ದಾಖಲಾತಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:50 IST
Last Updated 16 ಏಪ್ರಿಲ್ 2025, 12:50 IST
ಸಂತೇಮರಹಳ್ಳಿಯ ಜೆಎಸ್‌ಎಸ್ ವಿದ್ಯಾಸಂಸ್ಥೆ ವತಿಯಿಂದ ಶಿಕ್ಷಕರು ಈಚೆಗೆ ಮನೆಗಳಿಗೆ ಭೇಟಿನೀಡಿ ಶಾಲಾ ದಾಖಲಾತಿ ಆಂದೋಲನ ನಡೆಸಿದರು
ಸಂತೇಮರಹಳ್ಳಿಯ ಜೆಎಸ್‌ಎಸ್ ವಿದ್ಯಾಸಂಸ್ಥೆ ವತಿಯಿಂದ ಶಿಕ್ಷಕರು ಈಚೆಗೆ ಮನೆಗಳಿಗೆ ಭೇಟಿನೀಡಿ ಶಾಲಾ ದಾಖಲಾತಿ ಆಂದೋಲನ ನಡೆಸಿದರು   

ಸಂತೇಮರಹಳ್ಳಿ: ಇಲ್ಲಿನ ಜೆಎಸ್‌ಎಸ್ ವಿದ್ಯಾಸಂಸ್ಥೆ ವತಿಯಿಂದ ಶಿಕ್ಷಕರು ಈಚೆಗೆ ಮನೆಗಳಿಗೆ ಭೇಟಿ ನೀಡಿ ಶಾಲಾ ದಾಖಲಾತಿ ಆಂದೋಲನ ನಡೆಸಿದರು.

ಮುಖ್ಯಶಿಕ್ಷಕ ವೈ.ಪಿ.ವಿಶ್ವ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗಬೇಕು. ಯಾವ ಮಕ್ಕಳೂ ಶಾಲೆಯಿಂದ ಹೊರಗೆ ಉಳಿಯಬಾರದು. ಕಡ್ಡಾಯ ಶಿಕ್ಷಣ ಜಾರಿಯಲ್ಲಿ ಇರುವುದರಿಂದ ಪ್ರತಿಯೊಂದು ಮಗುವಿಗೂ ಶಿಕ್ಷಣ ಅವಶ್ಯಕವಾಗಿದೆ ಎಂದರು.

ಸರ್ಕಾರ ಶಿಕ್ಷಣದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಕ್ಕೆ ತಂದಿದೆ. ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಅವಕಾಶಗಳು ಪ್ರತಿಯೊಂದು ಮಕ್ಕಳಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಬೇಕು ಎಂದು ತಿಳಿಸಿದರು.

ADVERTISEMENT

ಪ್ರೌಢಶಾಲಾ ಮುಖ್ಯಶಿಕ್ಷಕ ಎ.ಜೆ.ಮರಿಸ್ವಾಮಿ, ಶಿಕ್ಷಕರಾದ ಮಮತಾ, ಯೋಗಾವತಿ, ಕಾಂತರಾಜು, ದೀಪಿಕಾ, ಜ್ಯೋತಿ, ನಾಗಮಾದೇಶ್, ಮಲ್ಲಿಕಾರ್ಜುನ, ಪ್ರಭು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.