ಯಳಂದೂರು: ‘ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರ ಪರಾಕ್ರಮವನ್ನು ವಿಶ್ವಕ್ಕೆ ಪ್ರಚುರಪಡಿಸಿತು. ಯುವ ಜನರಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಬಡಿದು ಎಚ್ಚರಿಸಿತು’ ಎಂದು ಪರ್ವತಾರೋಹಿ ಪ್ರದೀಪ್.ಎಸ್ ಹೇಳಿದರು.
ತಾಲ್ಲೂಕಿನ ಬನ್ನಿಸಾರಿಗೆ ಸಮೀಪದ ಯೋಧ ನವೀನ್ ಸ್ಮಾರಕದ ಬಳಿ ಗುರುವಾರ ಆಯೋಜಿಸಿದ್ದ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಅತಿ ಶೀತ ಪ್ರದೇಶ. ಅತ್ಯಂತ ಎತ್ತರದ ಶಿಖರಗಳಿಂದ ಆವೃತ ಹಿಮ ಸಂಚಿತ ದುರ್ಗಮ ತಾಣ. ಈ ಪ್ರದೇಶದಲ್ಲಿ ಜೀವದ ಹಂಗು ತೊರೆದು ಸೈನಿಕರು ಹೋರಾಡಿದರು. ಮೂರು ತಿಂಗಳ ಘರ್ಷಣೆ ನಂತರ ಪಾಕಿಸ್ತಾನ್ ಸೈನ್ಯ ಹಿಂದೆ ಸರಿಯಿತು. ನೂರಾರು ಯೋಧರು ಪ್ರಾಣ ಕಳೆದುಕೊಂಡು, ಭಾರತೀಯ ಸೈನಿಕರ ಶೌರ್ಯ ಪರಾಕ್ರಮಗಳನ್ನು ವಿಶ್ವಕ್ಕೆ ಸಾರಿದರು’ ಎಂದರು.
ಅರ್ಚಕ ಅಗ್ರಹಾರ ರಾಮಪ್ಪ, ಮುಖ್ಯ ಶಿಕ್ಷಕ ಮಹದೇವಪ್ರಸಾದ್, ಮುಖಂಡರಾದ ನವೀನ್, ರೇವಣ್ಣ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.